ಸಿದ್ದರಾಮಯ್ಯ, ಆಶೋಕ್ ನಡುವೆ ಕಬಡ್ಡಿ ಮಾತು, ಕಲಾಪದಲ್ಲಿ ಹಾಸ್ಯ ಚಟಾಕಿ!

ಹೈಸ್ಕೂಲ್‌ನಲ್ಲಿ ಕಬಡ್ಡಿ ಆಡುತ್ತಿದ್ದೆ. ಈಗ ಕಬಡ್ಡಿ ಇಲ್ಲ ಯಾವ ಆಟನೂ ಇಲ್ಲ ಎಂದು ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇಷ್ಟೇ ಅಲ್ಲ ಬೆಂಗಳೂರಿನಲ್ಲಿ ಬೋಟ್‌ನಲ್ಲಿ ತೆರಳುವ ಪರಿಸ್ಥಿತಿ ನಿರ್ಮಾಣ ಅನ್ನೋ ಮಾತಿಗೆ ಬಿಜೆಪಿ ಕಾಲೆಳೆದಿದೆ. ಅಧಿವೇಶನ, ರಾಜಕಾಲು ಒತ್ತುವರಿ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ. 

Share this Video
  • FB
  • Linkdin
  • Whatsapp

ಬೆಂಗಳೂರಿನ ಮಳೆ ಹಾಗೂ ಪ್ರವಾಹ ಕುರಿತು ಸಿದ್ದರಾಮಯ್ಯ ಸರ್ಕಾರದ ಕಾಲೆಳೆದಿದ್ದಾರೆ. ಮಹದೇವಪುರಕ್ಕೆ ಬೋಟ್‌ನಲ್ಲಿ ಹೋಗಿದ್ದೆ ಎಂಬ ಸಿದ್ದರಾಮಯ್ಯ ಮಾತಿಕೆ ಶಾಸಕ ಅರವಿಂದ ಲಿಂಬಾವಳಿ ಪ್ರತಿಕ್ರಿಯಿಸಿ, ನಡೆದುಕೊಂಡೇ ಹೋಗಬಹುದಿತ್ತಲ್ಲಾ ಎಂದರು. ಇತ್ತ ಬಸವರಾಜ್ ಬೊಮ್ಮಾಯಿ ಕೂಡ ಟಾಂಗ್ ನೀಡಿದರು. ಇತ್ತ ಸಚಿವ ಆರ್ ಆಶೋಕ್ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನಡುವೆ ಕಬಡ್ಡಿ ಮಾತು ಕಲಾಪವನ್ನು ಕೆಲ ಹೊತ್ತು ನಗೆಗಡಲಲ್ಲಿ ತೇಲಾಡಿಸಿತು. ಅಶೋಕ್ ಗಟ್ಟಿ ಮುಟ್ಟಾಗಿದ್ದಿಯಾ, ಕಬಡ್ಡಿ ಆಡ್ತಿದ್ದಿಯಲ್ಲಾ? ನಾನು ಹೈಸ್ಕೂಲ್ ದಿನದಲ್ಲಿ ಕಬಡ್ಡಿ ಆಡುತ್ತಿದ್ದೆ. ಈಗ ಯಾವ ಆಟ ಇಲ್ಲ ಎಂದು ಸಿದ್ದು ಹೇಳಿದ್ದಾರೆ. 

Related Video