ಕೊರೋನಾ ಬಗ್ಗೆ ಶಿವಕುಮಾರ್ ಗೆ ಅನುಮಾನ, ಅವಧಿಪೂರ್ವ ಚುನಾವಣೆ ನಡೆಸಲು ಹುನ್ನಾರ?
ಕೋವಿಡ್ ನೆಪ ಮಾಡಿಕೊಂಡು ಅವಧಿ ಪೂರ್ವದಲ್ಲಿಯೇ ಚುನಾವಣೆ ನಡೆಸುವ ಹುನ್ನಾರ ಮಾಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವಾಗ ಬೇಕಾದ್ರೂ ಚುನಾವಣೆ ಮಾಡಲಿ. ಕಾಂಗ್ರೆಸ್ ಚುನಾವಣೆಗೆ ಸಿದ್ಧವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿ (ಡಿ.22): ರಾಜ್ಯದಲ್ಲಿ ಕೋವಿಡ್ ನೆಪ ಮಾಡಿಕೊಂಡು ಅವಧಿ ಪೂರ್ವದಲ್ಲಿಯೇ ಚುನಾವಣೆ ನಡೆಸುವ ಹುನ್ನಾರ ಮಾಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವಾಗ ಬೇಕಾದ್ರೂ ಚುನಾವಣೆ ಮಾಡಲಿ. ಕಾಂಗ್ರೆಸ್ ಚುನಾವಣೆಗೆ ಸಿದ್ಧವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕೋವಿಡ್ ನೆಪದಲ್ಲಿ ಅವಧಿಪೂರ್ವ ಚುನಾವಣೆ (Election Prepone) ಮಾಡೋಕೆ ನೋಡ್ತಿದಾರೆ ಎಂದು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಿನ್ನೆ ಡಿಜಿ ಜೊತೆ ಎಲ್ಲ ಮಾತಾಡಿ ಚುನಾಚಣೆಗೆ ಸಿದ್ಧತೆ ಮಾಡೋಕೆ ಹೇಳಿದಾರೆ. ಇವತ್ತು ಕ್ಯಾಬಿನೆಟ್ ನಲ್ಲಿ ಮಾತಾಡ್ತಾರೆ ಅನ್ನೋ ಮಾಹಿತಿ ನನಗಿದೆ. ಇದು ಅಫೀಷಿಯಲ್ ಮಾಹಿತಿ ಅಲ್ಲ. ಅನ್ ಅಫೀಷಿಯಲ್ ಮಾಹಿತಿಯಾಗಿದೆ. ದೆಹಲಿಯ ಪ್ರಧಾನಿ ಕಛೇರಿಯಿಂದಲೇ ರಾಜ್ಯ ಬಿಜೆಪಿಗೆ ಫೋನ್ ಬಂದಿದೆ. ಅವರು ಚುನಾಚಣೆ ಯಾವಾಗಲೇ ಮಾಡಲಿ ನಾವು ಸಿದ್ದರಿದ್ದೇವೆ. ಆದರೆ ರಾಜ್ಯದಲ್ಲಿ ಭ್ರಷ್ಟಾಚಾರ ಜಾಸ್ತಿ ಆಗುತ್ತಿದೆ. ಕೋವಿಡ್ ನೆಪ ಇಟ್ಕೊಂಡು ರಾಹುಲ್ ಗಾಂಧಿ ಯಾತ್ರೆಗೆ ಜನ ಹೋಗಬಾರದು ಅಂತ ಪಿತೂರಿ ಮಾಡ್ತಿದಾರೆ ಎಂದು ಕಿಡಿಕಾರಿದರು.