ಇಲ್ಲಿ ಶಾಂತಿ ಸಂಧಾನ..ಅಲ್ಲಿ ಕ್ರಾಂತಿ ಸಂಘರ್ಷ..! ತೊಡೆ ತಟ್ಟಿದ ಹರಿಪ್ರಸಾದ್‌ಗೆ ಆಪ್ತನ ಮೂಲಕ ಟಕ್ಕರ್..!

ಕಾಂಗ್ರೆಸ್‌ನಲ್ಲಿ ಇಬ್ಬರು ನಾಯಕರ ದಂಗೆ..ದಂಗಲ್..!
ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿದ್ದಾರೆ ಶಾಮನೂರು..!
ಸಿದ್ದರಾಮಯ್ಯ ವಿರುದ್ಧ ಬಂಡೆದ್ದಿದ್ದಾರೆ ಹರಿಪ್ರಸಾದ್..!
ಸಿಡಿದೆದ್ದ ಶಾಮನೂರು ಕ್ರಾಂತಿಗೆ ಶಾಂತಿಯ ಮದ್ದು..!
ಬಂಡೆದ್ದ ಹರಿಪ್ರಸಾದ್ ಉರಿಗೆ  ಕ್ರಾಂತಿಯೇ ಗುದ್ದು..!

Share this Video
  • FB
  • Linkdin
  • Whatsapp

ಸಿದ್ದರಾಮಯ್ಯ ವಿರುದ್ಧ ದಂಗೆ ಎದ್ದಿದ್ದಾರೆ ಕಾಂಗ್ರೆಸ್‌ನ ಇಬ್ಬರು ನಾಯಕರು. ಬಂಡಾಯದ ಬೆಂಕಿ ಆರಿಸಲು ಸಿದ್ದು ಹೆಣೆದರು ಶಾಂತಿ-ಕ್ರಾಂತಿ ಮಂತ್ರ. ಒಬ್ಬರ ಜೊತೆ ಶಾಂತಿ, ಮತ್ತೊಬ್ಬರ ಜೊತೆ ಕ್ರಾಂತಿ. ಒಂದ್ಕಡೆ ಸಂಧಾನ, ಮತ್ತೊಂದು ಕಡೆ ಸಂಘರ್ಷ. ಕಾಂಗ್ರೆಸ್‌ನಲ್ಲಿ(Congress) ಇಬ್ಬರು ಹಿರಿಯ ನಾಯಕರ ದಂಗೆ.. ಬಂಡಾಯದ ದಂಗಲ್. ಅದೂ ಯಾರ ವಿರುದ್ಧ.. ಪ್ರಚಂಡ ಬಹುಮತದ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ. ಅವರಲ್ಲಿ ಒಬ್ಬರು ದಾವಣಗೆರೆಯ ಧಣಿ ಬಿರುದಾಂಕಿತ ಶಾಮನೂರು ಶಿವಶಂಕರಪ್ಪ(Shamanur Shivashankarappa), ಇನ್ನೊಬ್ಬರು ಕಾಂಗ್ರೆಸ್'ನ ಸೀನಿಯರ್ ಲೀಡರ್ ಬಿ.ಕೆ ಹರಿಪ್ರಸಾದ್. ಈ ದಂಗೆಯನ್ನು ಮಟ್ಟ ಹಾಕೋದಕ್ಕೆ ಸಿದ್ದರಾಮಯ್ಯನವರು(Siddaramaiah) ಚಾಣಕ್ಯ ತಂತ್ರ ಹೆಣೆದಿದ್ದಾರೆ. ಆ ತಂತ್ರದ ಹೆಸರು ಶಾಂತಿ-ಕ್ರಾಂತಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಸ್ ಲೀಡರೂ ಹೌದು, ಖಡಕ್ ಅಡ್ಮಿನಿಸ್ಟ್ರೇಟರೂ ಹೌದು.. ಅದೇ ರೀತಿ ರಾಜಕೀಯ ಚಾಣಕ್ಯನೂ ಹೌದು. ಅವ್ರಿಗೆ ಯಾರನ್ನು ಹೇಗೆ ಸಂಭಾಳಿಸ್ಬೇಕು, ಯಾರನ್ನು ಹೇಗೆ ಮಟ್ಟ ಹಾಕ್ಬೇಕು ಅನ್ನೋದು ಚೆನ್ನಾಗಿ ಗೊತ್ತು. ಅದ್ರಲ್ಲಿ ಪಂಟರ್ ಆಗಿರೋದ್ರಿಂದ್ಲೇ ಸಿದ್ದರಾಮಯ್ಯ ಎರಡೆರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದು. ಸಿದ್ದರಾಮಯ್ಯ ಬುದ್ಧಿರಾಮಯ್ಯನೂ ಹೌದು, ತಂತ್ರರಾಮಯ್ಯನೂ ಹೌದು. ಅವ್ರ ರಾಜಕೀಯದಾಟ, ಆ ಆಟದಲ್ಲಿ ಉರುಳಿಸೋ ದಾಳಗಳು ಹೇಗಿರ್ತವೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಈ ಶಾಂತಿ-ಕ್ರಾಂತಿ ಮಂತ್ರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ನೇಪಾಳದಲ್ಲಿ ಭೂಕಂಪ! ಸಿಕ್ಕಿಂನಲ್ಲಿ ಪ್ರವಾಹ? ಜೀವ ಉಳಿಸೋರ ಪ್ರಾಣವೇ ಅಪಾಯದಲ್ಲಿ!

Related Video