Asianet Suvarna News Asianet Suvarna News

ನಾನು ಬಿಎಸ್​ವೈ ಭೇಟಿ ಮಾಡಿದ್ದನ್ನ ಪ್ರೂವ್ ಮಾಡಿದ್ರೆ ರಾಜಕೀಯ ನಿವೃತ್ತಿ: ಎಚ್‌ಡಿಕೆಗೆ ಸವಾಲು

Oct 13, 2021, 8:40 PM IST

ಬೆಂಗಳೂರು, (ಅ.13):  ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಕದ್ದುಮುಚ್ಚಿ ಭೇಟಿಯಾಗಿದ್ದಾರೆ ಎನ್ನುವ ಕುಮಾರಸ್ವಾಮಿಯವರ ಹೇಳಿಕೆ ರಾಜ್ಯ ರಾಜಕಾರಣಲ್ಲಿ ಭಾರೀ ಸಂಚಲನ ಮೂಡಿಸಿದೆ.

ಸಿದ್ದು-ಬಿಎಸ್‌ವೈ ಕದ್ದುಮುಚ್ಚಿ ಭೇಟಿ: ಇದಕ್ಕೆ ಸ್ಪಷ್ಟನೆ ಕೊಟ್ಟ ಯಡಿಯೂರಪ್ಪ

ಇನ್ನು ಈ ಬಗ್ಗೆ ಇಂದು (ಅ.13 ಕಲಬುರಗಿಯಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಯಡಿಯೂರಪ್ಪರನ್ನ ಹುಟ್ಟುಹಬ್ಬದ ದಿನ ನಾನು ಭೇಟಿ ಮಾಡಿದ್ದೆ. ಅದನ್ನ ಹೊರತುಪಡಿಸಿ ನಾನು ಯಡಿಯೂರಪ್ಪರನ್ನ ಭೇಟಿ ಮಾಡಿಲ್ಲ. ಭೇಟಿ ಮಾಡೋ ಗಿರಾಕಿ ಕುಮಾರಸ್ವಾಮಿ. ನಾನು ಭೇಟಿ ಮಾಡಿದ್ದೇನೆ ಎಂದು ಪ್ರೂ ಮಾಡಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.