ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸ್ತೇವೆ, ಚರ್ಚೆಗೆ ಗ್ರಾಸವಾಯ್ತು ಈಶ್ವರಪ್ಪ ಮಾತು
ಕೇಸರಿ ಧ್ವಜವನ್ನು ಪ್ರಪಂಚದ ಯಾವುದೇ ಮೂಲೆಯಲ್ಲಾದ್ರೂ ಹಾರಿಸ್ತೇವೆ, ಇವತ್ತಲ್ಲ ನಾಳೆ ಕೆಂಪು ಕೋಟೆ ಮೇಲೆ ಕೇಸರಿ ಬಾವುಟ ಹಾರಿಸುತ್ತೇವೆ ಎಂದು ಹಿಜಾಬ್ ಟೀಕಿಸುವ ಭರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ವಿವಾದಿತ ಹೇಳಿಕೆ ನೀಡಿದ್ದಾರೆ.
ಬೆಂಗಳೂರು, (ಫೆ.09): ಕೇಸರಿ ಧ್ವಜವನ್ನು ಪ್ರಪಂಚದ ಯಾವುದೇ ಮೂಲೆಯಲ್ಲಾದ್ರೂ ಹಾರಿಸ್ತೇವೆ, ಇವತ್ತಲ್ಲ ನಾಳೆ ಕೆಂಪು ಕೋಟೆ ಮೇಲೆ ಕೇಸರಿ ಬಾವುಟ ಹಾರಿಸುತ್ತೇವೆ ಎಂದು ಹಿಜಾಬ್ ಟೀಕಿಸುವ ಭರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ವಿವಾದಿತ ಹೇಳಿಕೆ ನೀಡಿದ್ದಾರೆ.
ಹಿಜಾಬ್ ವಿವಾದ, ವಿದ್ಯಾರ್ಥಿಗಳಿಗೆ ಸದ್ಯಕ್ಕಿಲ್ಲ ರಿಲೀಫ್, ಕೋರ್ಟ್ ಹೇಳಿದ್ದಿಷ್ಟು
ವಿಧಾನಸೌಧದಲ್ಲಿ ಮಾತನಾಡಿದ ಈಶ್ವರಪ್ಪ ಅವರು ನಾನು ಸ್ವತಂತ್ರ ಭಾರತದಲ್ಲಿದ್ದೇನೆ, ಕೇಸರಿ ಶಾಲು ಹಂಚಲು ನಾನು ಸಿದ್ದನಿದ್ದೇನೆ. ನಾನು ಎಷ್ಟು ಬೇಕಾದ್ರೂ ಕೇಸರಿ ಶಾಲು ಹಂಚುತ್ತೇನೆ. ನನ್ನ ಸ್ವಾತಂತ್ರ್ಯ ಕೇಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಕೊಟ್ಟಿದ್ದು ಯಾರು? ಬಂಡೆ ಲೂಟಿ ಮಾಡಿದ ವ್ಯಕ್ತಿ ಡಿಕೆಶಿ. ಅವರು ತಿಹಾರ್ ಜೈಲಿಗೆ ಹೋಗಿ ಬಂದವರು ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.