
ರನ್ನ ವೈಭವ-2025 ಉತ್ಸವದ ಲೋಗೋ ಬಿಡುಗಡೆ ಮಾಡಿದ RB Timmapur
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆಯಲಿರೋ ರನ್ನ ವೈಭವ-2025 ರ ಉತ್ಸವಕ್ಕೆ ಲೋಗೋ ಬಿಡುಗಡೆ ಕಾರ್ಯಕ್ರಮ ನಡೆಸಲಾಯಿತು. ನಗರದ ರನ್ನ ಭವನದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ನೇತೃತ್ವದಲ್ಲಿ ರನ್ನ ವೈಭವ ಲೋಗೋ ಬಿಡುಗಡೆ ಮಾಡಲಾಯಿತು. ಇದರೊಂದಿಗೆ ಭಿತ್ತಿಚಿತ್ರಗಳು, ಬ್ಯಾನರ್ ಗಳನ್ನೂ ಸಹ ಬಿಡುಗಡೆ ಮಾಡಲಾಯಿತು. ಜೊತೆಗೆ ವಿವಿಧ ಸಮಿತಿಗಳ ಕಾರ್ಯನಿರ್ವಹಣೆಗಾಗಿ ತೆರೆದ ಕಚೇರಿಯ ಉದ್ಘಾಟನೆ ಸಹ ನಡೆಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ತಿಮ್ಮಾಪೂರ, ರನ್ನ ವೈಭವವನ್ನ ಒಂದು ಹಬ್ಬವಾಗಿ ಆಚರಿಸಲು ನಿರ್ಧರಿಸಿದ್ದು, ಈ ಸಂಭಂಧ ಬೆಂಗಳೂರಿನಿಂದ ಮುಧೋಳಕ್ಕೆ ರಥ ಸಂಚಾರ ನಡೆಸಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಮ್. ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.https://media.rhinoaffiliates.com/redirect.aspx?pid=15713&bid=2327&utm_source=display&utm_medium=asianet&utm_campaign=any_kan_2 Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared