ರಾಮನಗರ ಕಾಂಗ್ರೆಸ್ ನಗರಸಭೆ ಸದಸ್ಯನ ಹುಟ್ಟು ಹಬ್ಬದ ಪಾರ್ಟಿಯಲ್ಲಿ ನಂಗನಾಚ್

ರಾಮನಗರ ಕಾಂಗ್ರೆಸ್ ನಗರಸಭೆ ಸದಸ್ಯನ ಹುಟ್ಟು ಹಬ್ಬದ ಪಾರ್ಟಿಯಲ್ಲಿ, ಮೋಜು ಮಸ್ತಿ ನಡೆದ ವಿಡಿಯೋ ವೈರಲ್ ಆಗಿದೆ.

Share this Video
  • FB
  • Linkdin
  • Whatsapp

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತವರು ಜಿಲ್ಲೆಯಲ್ಲಿ ನಂಗನಾಚ್ ನಡೆದಿದ್ದು, ರಾಮನಗರ ‌ನಗರಸಭೆ 19ನೇ ವಾರ್ಡ್ ಸದಸ್ಯ ದೌಲತ್ ಶರೀಷ್ ಹುಟ್ಟಹಬ್ಬದಲ್ಲಿ ಮೋಜು ಮಸ್ತಿ ಮಾಡಲಾಗಿದೆ. ರಾಮನಗರದ ಯಾರಬ್ ನಗರದಲ್ಲಿರೋ ಖಾಸಗಿ ಕಲ್ಯಾಣ ಮಂಟಪದಲ್ಲಿ ಬರ್ತಡೇ ಪಾರ್ಟಿ ಮಾಡಲಾಗಿದ್ದು, ಬೆಂಗಳೂರಿನಿಂದ ಡ್ಯಾನ್ಸರ್'ಗಳನ್ನು ಕರೆಸಲಾಗಿದೆ. ಅರೆಬರೆ ಬಟ್ಟೆಯುಟ್ಟು ಡ್ಯಾನ್ಸ್ ಮಾಡಿದ್ದು, ಅವರ ಮೇಲೆ ಹಣ ಎಸೆದು ಮೋಜು ಮಸ್ತಿ ಮಾಡಲಾಗಿದೆ. ಕಾಂಗ್ರೆಸ್ ನಗರಸಭಾ ಸದಸ್ಯನಿಂದಲೇ ಪಾರ್ಟಿ ಆಯೋಜನೆ ಮಾಡಲಾಗಿದ್ದು, ಮದ್ಯಪಾನ ಮಾಡಿ ಕುಣಿದು ಕುಪ್ಪಳಿಸಿದ್ದಾರೆ ಕೈ ಸದಸ್ಯರು. ಪಾರ್ಟಿಯಲ್ಲಿ ನಗರಸಭಾ ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ ಕೆ. ಶೇಷಾದ್ರಿ, ಮಾಜಿ ಉಪಾಧ್ಯಕ್ಷ ಮುತ್ತುರಾಜ್, ದೌಲತ್ ಷರೀಫ್, ಆಜ್ಮತ್ ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು. ನವೆಂಬರ್ 24 ರ ರಾತ್ರಿ ಪಾರ್ಟಿ ನಡೆದಿದ್ದು, ನಗರಸಭಾ ಸದಸ್ಯರ ವರ್ತನೆಗೆ ಸಾರ್ವಜನಿಕರ ಖಂಡನೆ ವ್ಯಕ್ತವಾಗಿದೆ.

ಕೊಪ್ಪಳದ ಸಚಿವರ ಹುಟ್ಟುಹಬ್ಬದ ಕ್ರೀಡಾಕೂಟಕ್ಕೆ ದೈಹಿಕ ಶಿಕ್ಷಕರ ನಿಯೋಜನೆ?

Related Video