ಬಿಜೆಪಿಯಲ್ಲಿ ಭುಗಿಲೆದ್ದ ಕಿಚ್ಚು: ಯತ್ನಾಳ್ ಉಚ್ಚಾಟನೆ ಫಿಕ್ಸ್?

ಬಿಜೆಪಿಯಲ್ಲಿ ವಿಜಯೇಂದ್ರ ವಿರುದ್ಧ ಯತ್ನಾಳ್ ಬಣದ ನೇರ ಯುದ್ಧ, ಮಾಜಿ ಶಾಸಕರ ಬೀದಿಗಿಳಿದ ಪ್ರತಿಭಟನೆ, ಯತ್ನಾಳ್ ಉಚ್ಚಾಟನೆ ಸನ್ನಿಹಿತ ಎಂಬ ವದಂತಿಗಳ ನಡುವೆ ಪಕ್ಷದಲ್ಲಿ ಭುಗಿಲೆದ್ದಿರುವ ಭಿನ್ನಮತದ ಬೆಂಕಿ ಕಾಂಗ್ರೆಸ್‌ಗೆ ಬ್ರಹ್ಮಾಸ್ತ್ರವಾಗಿದೆ.

First Published Dec 1, 2024, 3:55 PM IST | Last Updated Dec 1, 2024, 3:55 PM IST

ಅದು ಸಹಸ್ರಾಯುಧ ಘರ್ಷಣೆಗೂ ಒಡೆಯದೇ ನಿಂತಿದ್ದ ಒಗ್ಗಟ್ಟಿನ ಮನೆ. ಆ ಮನೆಯ ಪರಿಸ್ಥಿತಿಯೀಗ ಮನೆಯೊಂದು ಮೂರು ಬಾಗಿಲು.. ಹಾದಿ ಬೀದಿ ಜಗಳ, ಹಾರಾಟ, ಚೀರಾಟ.. ಕಮಲಾಧಿಪತಿ ವಿರುದ್ಧ ರೆಬೆಲ್ ನಾಯಕರ ಕಿಚ್ಚು, ಬಂಡೆದ್ದು ದಂಡು ಕಟ್ಟಿದವರ ವಿರುದ್ಧ ಮಾಜಿ ಶಾಸಕರ ರೊಚ್ಚಿಗೆದ್ದಿದ್ದಾರೆ. ಇನ್ನೊಂದೆಡೆ ಕಮಲ ಕಲಿಗಳು ಶತ್ರುನಾಶ, ದುಷ್ಟ ಸಂಹಾರಕ್ಕೆ ಚಾಮುಂಡಿ ಮೊರೆ ಹೋಗಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಯತ್ನಾಳ್ ಟೀಮ್ ನೇರ ಯುದ್ಧಕ್ಕೆ ನಿಂತಿದೆ. ರೆಬೆಲ್ ಯತ್ನಾಳ್ ವಿರುದ್ಧ ಬಿಜೆಪಿ ಮಾಜಿ ಶಾಸಕರ ಪಡೆ ಬೀದಿಗಿಳಿದಿದೆ. ಸದ್ಯದಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಫಿಕ್ಸ್ ಅಂತ ರೇಣುಕಾಚಾರ್ಯ ಹೇಳುತ್ತಿದ್ದಾರೆ. ಹಾಗಾದರೆ, ಈ ನಾನಾ ನೀನಾ ಗುದ್ದಾಟದಲ್ಲಿ ಗೆಲ್ಲೋರು ಯಾರೆಂಬುದು ಕುತೂಹಲ ಮೂಡಿಸಿದೆ. ಯತ್ನಾಳ್ ಉಚ್ಚಾಟನೆಯ ದಿನ ಹತ್ತಿರ ಬರ್ತಾ ಇದೆ ಅಂದಿರೋರ ಮಾತು ಅದೆಷ್ಟು ಸತ್ಯ ಕಾದು ನೋಡಬೇಕಿದೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದೆಹಲಿಗೆ ಹೋಗಿದ್ದು ಅದೇ ಕಾರಣಕ್ಕಾ ಎಂಬುದಕ್ಕೆ ಉತ್ತರ ಇಲ್ಲಿದೆ ನೋಡಿ.

ಬೂದಿ ಮುಚ್ಚಿದ ಕೆಂಡದಂತಿದ್ದ ಬೆಂಕಿಯೀಗ ಕೆಂಡದ ಮಳೆಯಾಗಿ ಸುರೀತಾ ಇದೆ. ಬಿಜೆಪಿಯೊಳಗೆ ಸುರಿಯುತ್ತಿರೋ ಕೆಂಡದ ಮಳೆಯೇ ಕಾಂಗ್ರೆಸ್ ಪಾಲಿಗೆ ಬ್ರಹ್ಮಾಸ್ತ್ರ ಆಗಿದೆ. ಇದು ರಾಜ್ಯ ಬಿಜೆಪಿಯನ್ನು ಹೆಜ್ಜೆ ಹೆಜ್ಜೆಗೂ ಸುಡುತ್ತಿದೆ. ಅಷ್ಟಕ್ಕೂ ಕೇಸರಿ ಪಡೆಯ ಈ ಕೆಂಡದ ಮಳೆಯ ಬಗ್ಗೆ ಕೈ ನಾಯಕರು ವಿವಿಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಲಿಷ್ಠ ಸರ್ಕಾರವನ್ನು ಎದುರಿಸಬೇಕು ಎಂದರೆ ಪ್ರತಿಪಕ್ಷವೂ ಅಷ್ಟೇ ಬಲಿಷ್ಠವಾಗಿರಬೇಕು, ಒಗ್ಗಟ್ಟಾಗಿರಬೇಕು. ಆದರೆ, ಬಿಜೆಪಿಯಲ್ಲಿ ಒಗ್ಗಟ್ಟು ಒಡೆದು ಹೋಗಿದೆ.. ಈ ಒಡೆದಿರೋ ಒಗ್ಗಟ್ಟೇ ಕಾಂಗ್ರೆಸ್ ಪಾಲಿಗೆ ಬ್ರಹ್ಮಾಸ್ತ್ರವಾಗಿದೆ ಎಂದು ಹೇಳುತ್ತಿದ್ದಾರೆ. ಜೊತೆಗೆ, ಈ ಬೆಂಕಿಯನ್ನು ಆರಿಸುವ ಸಮಯ ಹತ್ತಿರ ಬಂದಿದೆ, ಕ್ಲೈಮ್ಯಾಕ್ಸ್ ಹತ್ತಿರದಲ್ಲೇ ಇದೆ ಅಂತಿದ್ದಾರೆ ಬಿಜೆಪಿ ನಾಯಕರು.