ಅಜ್ಜಿ ಅಬ್ಬರಿಸಿದ್ದ ಸಂಸತ್‌ಗೆ ಮೊಮ್ಮಗಳ ದೊಡ್ಡ ಹೆಜ್ಜೆ!, ಅದೇ ಚಹರೆ ಅದೇ ಕಿಚ್ಚು ಮತ್ತೆ ಬಂದ್ರಾ ಇಂದಿರಾ?

ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇರಳದ ಸಾಂಪ್ರದಾಯಿಕ ಉಡುಪಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಹುಲ್ ಗಾಂಧಿ ಜೊತೆಗೆ ಪ್ರಿಯಾಂಕಾ ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ನಿರೀಕ್ಷೆಯಿದೆ.

First Published Nov 29, 2024, 9:28 PM IST | Last Updated Nov 29, 2024, 9:28 PM IST

ಸಂಸತ್‌ನಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಅಧಿವೇಶನದ ನಾಲ್ಕನೇ ದಿನ ಇಂದಿರೆಯ ಮೊಮ್ಮಗಳು ಸಂಸತ್ಗೆ ಎಂಟ್ರಿ ಕೊಟ್ಟಿದ್ದಾರೆ. ಕೇರಳ ಸಂಪ್ರದಾಯಿಕ ಉಡುಗೊರೆಯಲ್ಲಿ ಮಿಂಚಿದ್ದಾರೆ. ಸಂವಿಧಾನ ಕೈಯಲ್ಲಿ ಹಿಡಿದು ಪ್ರಮಾಣ ವಚನ ಪಡೆದಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಸಂಸತ್ಗೆ ಎಂಟ್ರಿ ಕೊಡುವ ಮೂಲಕ ಅಜ್ಜಿ ಇಂದಿರಾ ಗಾಂಧಿಯನ್ನು ನೆನಪು ಮಾಡಿಕೊಟ್ಟಿದ್ದಾರೆ. ಲೋಕಸಭೆಯಲ್ಲಿ ಇಂದಿರಾ ಚಹರೆಯನ್ನು ಇನ್ಮುಂದೆ ಕಾಣಬಹುದು ಎಂದು ಅಭಿಮಾನಗಳು ಅತ್ಯಂತ ಹರ್ಷಗೊಂಡಿದ್ದಾರೆ. 

ಸಂಸತ್ ಒಳಗಡೆ ರಾಹುಲ್ ಗಾಂಧಿಗೆ ಮತ್ತಷ್ಟು ಬಲ ಹೆಚ್ಚಿದೆ. ಅಧಿವೇಶನದಲ್ಲಿ ರಾಹುಲ್ ಧ್ವನಿಯಾಗಿ ತಂಗಿ ಪ್ರಿಯಾಂಕಾ ಮತ್ತಷ್ಟು ಶಕ್ತಿ ಹೆಚ್ಚಿಸಲಿದ್ದಾರೆ. ಚಿಕ್ಕಂದಿನಿಂದಲೂ ಅಣ್ಣ-ತಂಗಿ ಒಬ್ಬರಿಗೊಬ್ಬರು ಸಪೋಟಿವ್ ಆಗಿಯೇ ಇದ್ದವರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಲು ಇಬ್ಬರು ಪಣ ತೊಟ್ಟು ನಿಲ್ಲೋದ್ರಲ್ಲಿ ಯಾವುದೇ ಅನುಮಾನವಿಲ್ಲ. 
 
ರಾಜ್ಯ ಸಭೆಯಲ್ಲಿ ತಾಯಿ ಪ್ರಿಯಾಂಕಾ ಗಾಂಧಿ, ಇನ್ನು ಲೋಕಸಭೆಯಲ್ಲಿ ರಾಹುಲ್ ಮತ್ತು ಪ್ರಿಯಾಂಕ ಅಬ್ಬರ. ಒಂದೇ ಕುಟುಂಬದ ಮೂವರು ಸದಸ್ಯರು ಸಂಸರ್ ಸದಸ್ಯರಾಗಿರೋದು ಇದೇ ಮೊದಲು. ಅಜ್ಜಿಯ ಭವಿಷ್ಯವನ್ನು ನಿಜವಾಗಿಸಲು ಪ್ರಿಯಾಂಕಾ ಗಾಂಧಿ ವಯನಾಡಿನಲ್ಲಿ ಭರ್ಜರಿ ಗೆಲುವು ಪಡೆದು ಸಂಸತ್ ಪ್ರವೇಶ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಸತ್ ಒಳಗು ಮತ್ತು ಹೊರಗೂ ಅಣ್ಣ ತಂಗಿಯ ಆರ್ಭಟ ಹೆಚ್ಚು ಹೆಚ್ಚು ಕೇಳುವುದರಲ್ಲಿ ಅನುಮಾನವಿಲ್ಲ.