2024ರ ಸಮರದಲ್ಲಿ ಮೋದಿಗೆ ಮೋದಿಯೇ ಎದುರಾಳಿ!

2024ರ ಲೋಕ ಸಮರ..ನರೇಂದ್ರ ಮೋದಿ ವಿರುದ್ಧ ನರೇಂದ್ರ ಮೋದಿ..! ಮೋದಿಯನ್ನ ಸೋಲಿಸೋರಿಲ್ವಾ..? ಪರ್ಯಾಯ ನಾಯಕರಿಲ್ವಾ..? ಅಜೇಯ ಮೋದಿಯ ನಾಗಾಲೋಟ..? ವಿಪಕ್ಷಗಳಿಗೆ ಮೋದಿಯನ್ನ ಸೋಲಿಸೋದು ಮಿಷನ್ ಇಂಪಾಸಿಬಲ್ ಯಾಕೆ..?

Share this Video
  • FB
  • Linkdin
  • Whatsapp

ಬೆಂಗಳೂರು (ಸೆ.12): 2024ರ ಲೋಕಸಭಾ ಸಮರಕ್ಕೆ ಈಗಾಗಲೇ ಎಲ್ಲಾ ಪಕ್ಷಗಳಿಂದ ತಯಾರಿ ಶುರುವಾಗಿದೆ. ಮೋದಿ ಅನ್ನೋ ಹೆಸರೇ ಬಿಜೆಪಿಗೆ ಶಕ್ತಿಯಾಗಿದ್ದರೆ, ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿಯೇ ಆಶಾಕಿರಣ.. ಆಮ್ ಆದ್ಮಿಗೆ ಅರವಿಂದ್ ಕೇಜ್ರಿವಾಲ್ , ಟಿಎಂಸಿಗೆ ಮಮತಾ ಬ್ಯಾನರ್ಜಿ ಹೀಗೆ ರಾಷ್ಟ್ರೀಯ ಪಕ್ಷಗಳಿಂದ ಹಿಡಿದು ಪ್ರಾದೇಶಿಕ ಪಕ್ಷಗಳು ತಮ್ಮ ತಮ್ಮ ನಾಯಕರನ್ನ ಮುಂದಿಟ್ಟುಕೊಂಡು ಚುನಾವಣಾ ಸಿದ್ಧತೆಯಲ್ಲಿ ನಿರತವಾಗಿವೆ. ಆದರೆ, ಮೋದಿಯನ್ನ ಹಿಮ್ಮಟ್ಟಿಸಿ ಪ್ರಧಾನಿ ಸ್ಥಾನದಲ್ಲಿ ಇನ್ನೊಬ್ಬರು ಕೂರಬಹುದೇ? ಅದು ಅಸಂಭವ ಎನ್ನುತ್ತಿದೆ ಈಗಿನ ಸ್ಥಿತಿಗತಿಗಳು.. ಹೀಗಾಗಿ 2024ರ ಚುನಾವಣೆಯಲ್ಲಿ ಮೋದಿ ವರ್ಸಸ್ ಮೋದಿ ಅನ್ನೋ ಥರ ವಿಶ್ಲೇಷಣೆಗಳು ಆಗುತ್ತಿವೆ. ಇದರ ರಾಜಕೀಯ ಲೆಕ್ಕಾಚಾರದ ಕಂಪ್ಲೀಟ್‌ ರಿಪೋರ್ಟ್‌ ಇಲ್ಲಿದೆ.

ಸೆಪ್ಟೆಂಬರ್‌ 17ರಿಂದ PM Modiಗೆ ಬಂದ 1200 ಉಡುಗೊರೆಗಳ ಹರಾಜು

ಮೋದಿಯನ್ನ ಮಣಿಸೋಕೆ ಅವರು ಗುಜರಾತ್ ಸಿಎಂ ಆಗಿದ್ದಾಗಿನಿಂದ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ, ಇದು ಸಂಪೂರ್ಣವಾಗಿ ವಿಫಲವಾಗಿದೆ. ಹೇಗೆ ಮೋದಿ ಯಾರೂ ಮುಟ್ಟಲಾಗದ ಎತ್ತರಕ್ಕೆ ಬೆಳೆದರು..? ಮೋದಿ ಬಿಟ್ಟರೆ ನಾಯಕರಿಲ್ಲ ಅನ್ನೋ ಸನ್ನಿವೇಶವನ್ನೂ ಬಿಜೆಪಿ ಸೃಷ್ಟಿಸಿದೆ. ಹಾಗಂತ ಮೋದಿಗೆ ಹಿನ್ನಡೆಯಾಗಿಲ್ಲ ಎಂದಲ್ಲ. ಕೆಲವು ಕಡೆ ಮೋದಿ ಕೂಡ ಸೋತಿದ್ದಾರೆ. ಆದರೆ, ಇದರಿಂದ ಆಗುವ ಪರಿಣಾಮ ಏನಾಗಿದೆ ಅನ್ನೋದನ್ನ ಮುಂದಿನ ಚುನಾವಣೆಯೇ ತಿಳಿಸಲಿದೆ.

Related Video