'ಕೈ'ಗೆ ಮತ ಹಾಕಿದ್ರೆ ಡಿಕೆಶಿ ಸಿಎಂ ಆಗ್ತಾರಾ? ಜೆಡಿಎಸ್‌ಗೆ ವೋಟ್ ಹಾಕಿದ್ರೆ ಎಚ್‌ಡಿಕೆ ಸಿಎಂ ಆಗ್ತಾರಾ?

ಶಿರಾ ಸಮಾವೇಶದಲ್ಲಿ ಪ್ರತಾಪ್ ಸಿಂಹ ಇಂದು ಭಾಗಿಯಾಗಿ  ರಾಜೇಶ್ ಗೌಡ ಪರ ಪ್ರಚಾರ ಮಾಡಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 30): ಶಿರಾ ಸಮಾವೇಶದಲ್ಲಿ ಪ್ರತಾಪ್ ಸಿಂಹ ಇಂದು ಭಾಗಿಯಾಗಿ ರಾಜೇಶ್ ಗೌಡ ಪರ ಪ್ರಚಾರ ಮಾಡಿದ್ದಾರೆ. 

'ಜನನಾಯಕರು, ಬಡವರ ಬಂಧು, ರೈತ ನಾಯಕರಾದ ಯಡಿಯೂರಪ್ಪ ಸಾಹೇಬರು ಈ ನೆಲದಲ್ಲಿ ಕಾಲಿಡುತ್ತಿದ್ದಾರೆ ಅಂದ್ರೆ ನಿಮ್ಮ ಪಕ್ಕದಲ್ಲಿಯೇ ಇರುವ ಮದಲೂರು ಕೆರೆ ಭರ್ತಿಯಾಗುತ್ತದೆ. ನೀರನ್ನು ನೋಡುತ್ತದೆ ಎಂದೇ ಅರ್ಥ' ಎಂದು ಹೇಳಿದ್ದಾರೆ.

RR ನಗರ ರಸ್ತೆಗಳನ್ನು ನೋಡಿದ್ರೆ ಮುನಿರತ್ನ ಅಭಿವೃದ್ಧಿ ಕೆಲಸ ಅರ್ಥವಾಗುತ್ತದೆ: ದರ್ಶನ್

ಕುಂಚಗ ಸಮಾಜ, ತಳವಾರ ಸಮಾಜವನ್ನು ಎಸ್ಟಿಗೆ ಸೇರಿಸುವಲ್ಲಿ ಯಡಿಯೂರಪ್ಪ ಸಾಹೇಬ್ರು, ಸದಾನಂದ ಗೌಡ್ರು ಮುಖ್ಯ ಪಾತ್ರ ವಹಿಸಿದ್ಧಾರೆ. ಅದೇ ರೀತಿ ಕುಂಚಲಗ ಸಮಾಜವನ್ನು ಮುಂದಿನ ದಿನಗಳಲ್ಲಿ ಸೇರಿಸುತ್ತಾರೆ' ಎಂದು ಭರವಸೆ ನೀಡಿದ್ದಾರೆ. ಒಂದು ವೇಳೆ ಜೆಡಿಎಸ್‌ಗೆ ವೋಟ್ ಹಾಕಿದ್ರೆ ಕುಮಾರಣ್ಣ ಸಿಎಂ ಆಗ್ತಾರಾ? ಕಾಂಗ್ರೆಸ್‌ಗೆ ವೋಟ್ ಹಾಕಿದ್ರೆ ಡಿಕೆಶಿ ಸಿಎಂ ಆಗ್ತಾರಾ? ಎಂದು ಪ್ರಶ್ನಿಸಿದ್ದಾರೆ. 

Related Video