India-China dispute: ಅಲ್ಲಿ ಭಾರತ-ಚೀನಾ ಗಡಿ 'ಸಂಘರ್ಷ': ಇಲ್ಲಿ ಬಿಜೆಪಿ-ಕಾಂಗ್ರೆಸ್ 'ರಾಜಕೀಯ' ಸಂಘರ್ಷ

ಭಾರತ ಹಾಗೂ ಚೀನಾ ಸೈನಿಕರ ನಡುವೆ ತವಾಂಗ್‌ನಲ್ಲಿ ಗಡಿ ಸಂಘರ್ಷ ನಡೆಯುತ್ತಿದ್ದು, ಚೀನಾ ಸೈನಿಕರನ್ನು ಯಶಸ್ವಿಯಾಗಿ ಭಾರತೀಯ ಸೇನೆ ಹಿಮ್ಮೆಟ್ಟಿಸಿದೆ.

Share this Video
  • FB
  • Linkdin
  • Whatsapp

ಗಡಿ ಸಂಘರ್ಷ ವಿಷಯವಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ಜಟಾಪಟಿ ಶುರುವಾಗಿದೆ. ಚೀನಾ ವಿರುದ್ಧ ಮೋದಿ ಸರ್ಕಾರ ಗಟ್ಟಿಯಾಗಿ ಮಾತಾನಾಡಬೇಕು. ಚೀನಾ ವಿರುದ್ಧ ಮೆದುವಾಗಿ ಮಾತಾಡುವುದನ್ನು ಸರ್ಕಾರ ಬಿಡಲಿ ಎಂದು ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ನಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಮೋದಿ ಸರ್ಕಾರ ಭಾರತ-ಚೀನಾ ಗಡಿ ವಿಷಯವನ್ನು ಮುಚ್ಚಿಡುತ್ತಿದೆ, ಎರಡು ವರ್ಷಗಳಿಂದ ಮೋದಿ ಸರ್ಕಾರವನ್ನು ಎಚ್ಚರಿಸಲು ಯತ್ನಿಸುತ್ತಿದ್ದೇವೆ. ಗಡಿ ವಿಷಯಕ್ಕಿಂತ ಮೋದಿಗೆ ಇಮೇಜ್‌ ಮುಖ್ಯ ಎಂದು ಜೈರಾಮ್‌ ರಮೇಶ್‌ ಹೇಳಿದ್ದಾರೆ. ಇನ್ನು ಆಕ್ರಮಣಕ್ಕೆ ಯತ್ನಿಸಿದ ಚೀನಾ ಸೈನಿಕರನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದೆ. ಅತಿಕ್ರಮಣಕ್ಕೆ ಯತ್ನಿಸಿದರೆ, ಭಾರತೀಯ ಸೇನೆಯೂ ತಕ್ಕ ಉತ್ತರ ನೀಡಲಿದೆ. ಚೀನಾಗೆ ತಕ್ಕ ಉತ್ತರ ಕೊಟ್ಟ ಸೇನೆಗೆ ಅಭಿನಂದನೆ ಎಂದು ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ.

ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಕುರಿತು ಪ್ರಧಾನಿ ಮೋದಿ ಜೊತೆ ದೇವೇಗೌಡ ಚರ್ಚೆ

Related Video