
ಕರಾವಳಿಯಲ್ಲಿ 'ಕೈ' ನಾಯಕನ ವಿವಾದಾತ್ಮಕ ಮಾತು: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಎಲೆಕ್ಷನ್ ಹೊತ್ತಲ್ಲೇ ಡಿಕೆಶಿ ಆಪ್ತನಿಂದ ಮತ್ತೊಂದು ವಿವಾದ ಉಂಟಾಗಿದ್ದು,ಕೈ ನಾಯಕ ಮಿಥುನ್ ರೈ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಕರಾವಳಿಯಲ್ಲಿ ನಮ್ಮೂರ ಮಸೀದಿ ನೋಡ ಬನ್ನಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ಮಿಥುನ್ ರೈ ವಿವಾದಾತ್ಮಕ ಹೇಳಿಕೆ ನೀಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ಮೂಡ್‌ಬಿದ್ರೆಯ ಕಾರ್ಯಕ್ರಮದಲ್ಲಿ ಮಿಥುನ್ ರೈ ಉಡುಪಿ ಶ್ರೀಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು ಎಂಬ ಮಾತು ವಿವಾದ ಸೃಷ್ಟಿಸಿದೆ. ಕೈ ನಾಯಕನ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ರಾಜಕೀಯ ನಾಯಕರಿಂದಲೂ ಮಿಥುನ್ ರೈ ಮಾತಿಗೆ ಖಂಡನೆ ಮಾಡಲಾಗಿದೆ .
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ