ಮತ್ತೆ ಪಕ್ಷಾಂತರ ಯೋಗೇಶ್ವರ್ ಮತ್ತೊಂದು ಆಟ; 5ನೇ ಚುನಾವಣೆ, 4ನೇ ಚಿಹ್ನೆಯಿಂದ ಸೈನಿಕನ ಸ್ಪರ್ಧೆ!

ಚನ್ನಪಟ್ಟಣದಲ್ಲಿ ಚರಿತ್ರೆ ಕಂಡು ಕೇಳರಿಯದ ಮಹಾಯುದ್ಧ! ಕುರುಕ್ಷೇತ್ರಕ್ಕೆ ನುಗ್ಗಿದವರನ್ನು ಹೆಜ್ಜೆ ಹೆಜ್ಜೆಗೂ ಕಾಡುತ್ತಿದೆ ಆ ನಂಬರ್ ಗೇಮ್ ರಹಸ್ಯ! 25 ವರ್ಷ, ಒಬ್ಬ ಸೈನಿಕ.. ಚನ್ನಪಟ್ಟಣ ರಾಜಕಾರಣದಲ್ಲಿ ನಡೆದದ್ದೇನು? ಜೆಡಿಎಸ್ ಯುವರಾಜನ ಎಂಟ್ರಿಯೊಂದಿಗೆ ಬದಲಾಯ್ತಾ ಬೊಂಬೆನಾಡಿನ ಚದುರಂಗದ ಲೆಕ್ಕಾಚಾರ? ಯುದ್ಧ ಗೆಲ್ಲಲು ಹೊರಟವರಿಗೆ ಎದುರಾಗಿರೋದು ಅದೆಂಥಾ ಚಾಲೆಂಜ್? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಚನ್ನಪಟ್ಟಣ ನಂಬರ್ ಗೇಮ್!

Share this Video
  • FB
  • Linkdin
  • Whatsapp

ಆರು ಚುನಾವಣೆಗಳಲ್ಲಿ 4 ಚಿಹ್ನೆಗಳಿಂದ ಸ್ಪರ್ಧಿಸಿ ಐದು ಬಾರಿ ಗೆದ್ದ ಯೋಗೇಶ್ವರ್, ನಂತ್ರ ಚನ್ನಪಟ್ಟಣದಲ್ಲಿ ಗೆಲ್ಲಲೇ ಇಲ್ಲ. ನಂಬರ್ ಗೇಮ್ ರಹಸ್ಯವನ್ನು ಭೇದಿಸಲು ಸೈನಿಕನಿಗೆ ಸಾಧ್ಯವಾಗ್ಲೇ ಇಲ್ಲ. ಕಾರಣ, ದಳಪತಿ ದ್ವೇಷ, ಅಷ್ಟಕ್ಕೂ ಏನದು ದ್ವೇಷ? ಯೋಗೇಶ್ವರ್ ಆಟಕ್ಕೆ ಆ ದುಷ್ಮನಿ ಬ್ರೇಕ್ ಹಾಕಿದ್ದು ಹೇಗೆ ಅನ್ನೋ ಕುರಿತ ವರದಿ ಇಲ್ಲಿದೆ.

Related Video