ಇಂದು ರಾಜ್ಯದಲ್ಲಿ 'ನಮೋ' ಮಿಂಚಿನ ಸಂಚಾರ: ಅಭಿವೃದ್ಧಿ ಮಂತ್ರ ಜಪ

ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಬಿಜೆಪಿ ಸಿದ್ಧತೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಇಂದು ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಿಂಚಿನ ಸಂಚಾರ ನಡೆಸಲಿದ್ದಾರೆ.

Share this Video
  • FB
  • Linkdin
  • Whatsapp

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, 2023ರ ಮತಯುದ್ಧಕ್ಕೆ ಕೇಸರಿ ಪಡೆ ಭರ್ಜರಿ ತಾಲೀಮು ನಡೆಸಿದೆ. ಇಂದು ರಾಜ್ಯದ 2 ಜಿಲ್ಲೆ 5 ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಬೆಂಗಳೂರು ಹಾಗೂ ತುಮಕೂರಿನಲ್ಲಿ ಮೋದಿ ಅಭಿವೃದ್ಧಿ ಮಂತ್ರ ಜಪಿಸಲಿದ್ದಾರೆ. ಬೆಳಗ್ಗೆ 10.55ಕ್ಕೆ ಬೆಂಗಳೂರಿಗೆ ಮೋದಿ ಆಗಮಿಸಲಿದ್ದು, ಸಿಎಂ ಬೊಮ್ಮಾಯಿ ಸ್ವಾಗತಿಸಲಿದ್ದಾರೆ. ಬಿಐಇಸಿಯಲ್ಲಿ ಇಂಧನ ಸಪ್ತಾಹ ಉದ್ಘಾಟನೆ, ಜಾಗತಿಕ ತೈಲ ಮತ್ತು ಅನಿಲವಲಯದ ಸಿಇಒಗಳ ಸಭೆ ಹಾಗೂ ಹಸಿರು ಸಾಗಣೆ ಜಾಥಾಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

Related Video