ಜೆಡಿಎಸ್ ಪಂಚರತ್ನ ಯಾತ್ರೆ ನಿಲ್ಲಿಸಲು ಮೋದಿ ದೆಹಲಿಯಲ್ಲಿ ಸಭೆ, ಹೆಚ್‌ಡಿಕೆ ಹೊಸ ಬಾಂಬ್!

ಕೊರೋನಾ ಎದುರಿಸುವಲ್ಲಿ ಚೀನಾ ಮಾಡಿದೆ ಹಲವು ಎಡವಟ್ಟು, ಕೊರೋನಾಗೆ ಬೂಸ್ಟರ್ ಡೋಸ್ ಕಡ್ಡಾಯ ಮಾಡಿ, ಪಂಚಮಸಾಲಿ ಬೃಹತ್ ಸಮಾವೇಶ, ಇಕ್ಕಟ್ಟಿನಲ್ಲಿ ಸರ್ಕಾರ, ಪಂಚಮಸಾಲಿ ಮುಖಂಡರ ಮನವೊಲಿಸಿದ ಸಿಎಂ, ಡಿ.29ಕ್ಕೆ ಡೆಡ್‌ಲೈನ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Dec 22, 2022, 11:10 PM IST | Last Updated Dec 22, 2022, 11:10 PM IST

ಜೆಡಿಎಸ್ ಪಂಚರತ್ನ ಯಾತ್ರೆ ನಿಲ್ಲಿಸಲು ಪ್ರಧಾನಿ ಮೋದಿ ದೆಹಲಿಯಲ್ಲಿ ಕೊರೋನಾ ತುರ್ತು ಸಭೆ ನಡೆಸಿದ್ದಾರೆ. ಇದು ಕೇಶವ ಕೃಪ ನಡೆಸಿದ  ಕುತಂತ್ರ ಎಂದು ಹೆಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಪಂಚರತ್ನ ಯಾತ್ರೆಗೆ ಭಾರಿ ಜನ ಸೇರುತ್ತಿದ್ದಾರೆ. ಇದರಿಂದ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ತಲೆನೋವಾಗಲಿದೆ. ಹೀಗಾಗಿ ಪಂಚರತ್ನ ಯಾತ್ರೆ ನಿಲ್ಲಿಸಲು ಕೊರೋನಾ ನೆಪೆ ಹೇಳಿ ಸಭೆ ನಡೆಸಲಾಗಿದೆ. ಪ್ರಧಾನಿ ಮೋದಿ, ಅಮಿತ್ ಶಾ, ಮನ್ಸುಕ್ ಮಾಂಡವಿಯಾ ಸೇರಿದಂತೆ ಪ್ರಮುಖರು ಪಾಲ್ಗೊಂಡು ಪಂಚರತ್ನ ಯಾತ್ರೆ ನಿಲ್ಲಿಸಲು ಚರ್ಚಿಸಾಗಿದೆ ಎಂದು ಹೆಚ್‌ಡಿಕೆ ಆರೋಪಿಸಿದ್ದಾರೆ. ಇತ್ತ ಅವಧಿ ಪೂರ್ವ ಚುನಾವಣೆಗೆ ಕೇಂದ್ರ ಮುಂದಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.