Party Rounds: ಸಂಪುಟ ವಿಸ್ತರಣೆ ವಿಚಾರ, ಎಲ್ಲೂ ತಾಳೆಯಾಗದ ಸಿದ್ದರಾಮಯ್ಯ- ಡಿಕೆಶಿ ಲೆಕ್ಕಾಚಾರ!

ಸಚಿವ ಸಂಪುಟ ವಿಸ್ತರಣೆ ಕಗ್ಗಂಟು ಇನ್ನೂ ಮುಂದುವರಿಯುತ್ತಾ? ಸಿದ್ದರಾಮಯ್ಯ ಲೆಕ್ಕಾಚಾರ ಏನು? ಡಿಕೆಶಿ ಪ್ರತಿತಂತ್ರ ಏನು?

Share this Video
  • FB
  • Linkdin
  • Whatsapp

ಬೆಂಗಳೂರು (ಮೇ.23): ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನಾಳೆ ದೆಹಲಿಗೆ ತೆರಳಲಿದ್ದಾರೆ. ಇದರ ಒಟ್ಟಾರೆ ಉದ್ದೇಶ ಸಂಪುಟ ವಿಸ್ತರಣೆ. ಕಾಂಗ್ರೆಸ್‌ನ ಜೋಡೆತ್ತು ಸರ್ಕಾರಕ್ಕೆ ಇರುವ ಮುಂದಿನ ಸವಾಲು ಸಂಪುಟ ವಿಸ್ತರಣೆ. ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಇಬ್ಬರೂ ಕೂಡ ತಮ್ಮ ಬಣದ ಶಾಸಕರಿಗೆ ಹೆಚ್ಚಿನ ಸಚಿವ ಸ್ಥಾನ ಪಡೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಇದರ ನಡುವೆ ಸಿದ್ಧರಾಮೋತ್ಸವದಲ್ಲಿ ಮುಂಚೂಣಿಯಲ್ಲಿದ್ದು ಕೆಲಸ ಮಾಡಿದವರಿಗೆ ಮಂತ್ರಿಗಿರಿ ಸಿಗುತ್ತಾ ಎನ್ನುವ ಪ್ರಶ್ನೆ ಕೂಡ ಎದ್ದಿದೆ. ಇನ್ನೊಂದೆಡೆ ಡಿಕೆಶಿ, ತಮ್ಮ ಜೊತೆಗಿದ್ದವರಿಗೆ ಮಂತ್ರಿಗಿರಿ ನೀಡಲು ದೊಡ್ಡ ಪ್ಲ್ಯಾನ್‌ ಮಾಡುತ್ತಿದ್ದಾರೆ.

ಕಾಂಗ್ರೆಸ್‌ ಒಗ್ಗಟ್ಟಿಗೆ ಬೆಂಕಿಯಿಟ್ಟ ಎಂ.ಬಿ. ಪಾಟೀಲ್‌: ಪವರ್‌ ಶೇರಿಂಗ್‌ ಹೇಳಿಕೆ ರಹಸ್ಯವೇನು?

Related Video