ಆಸ್ಕರ್ ಮನೆ ಅಂದ್ರೆ ಕಾಂಗ್ರೆಸ್ ಆಫೀಸ್.. ಸದಾ ಲಭ್ಯ!

* ದಿನದ 24 ಗಂಟೆಯೂ ಕಾರ್ಯಕರ್ತರಿಗೆ ಲಭ್ಯವಿರುತ್ತಿದ್ದ ಆಸ್ಕರ್ ಫರ್ನಾಂಡೀಸ್
* ರಾಷ್ಟ್ರೀಯ ನಾಯಕನಾಗಿ ಬೆಳೆದರೂ, ತವರೂರಲ್ಲಿ ಅಪ್ಪಟ ಮಣ್ಣಿನ ಮಗ
* ಹುಟ್ಟೂರು, ರಾಜಕೀಯ ಜೀವನದ ಆರಂಭ, ಉನ್ನತಿ ಎಲ್ಲವೂ ಉಡುಪಿಯಲ್ಲೇ
* ಆಸ್ಕರ್ ಮನೆ ಅಂದ್ರೆ ಕಾಂಗ್ರೆಸ್ ಆಫೀಸ್, ಅಲ್ಲಿಗೆ ಬಾರದ ನಾಯಕರಿಲ್ಲ!
* ಸದ್ಯ ವಾಸವಿಲ್ಲದೆ , ಪಾಳು ಬಿದ್ದರೂ ಜನಾಕರ್ಷಣೆ ಉಳಿಸಿಕೊಂಡಿರುವ ಮನೆ

First Published Sep 13, 2021, 9:00 PM IST | Last Updated Sep 13, 2021, 9:00 PM IST

ಉಡುಪಿ(ಸೆ. 13)   ಆಸ್ಕರ್ ಫೆರ್ನಾಂಡಿಸ್ ರಾಷ್ಟ್ರೀಯ ನಾಯಕರಾಗಿ ಬೆಳದರೂ, ಉಡುಪಿ ಅವರ ಹುಟ್ಟೂರು, ಅವರ ರಾಜಕೀಯ ಜೀವನದ ಆರಂಭ, ಉನ್ನತಿ ಪ್ರತಿಯೊಂದೂ ಉಡುಪಿಯಲ್ಲೇ ಆಗಿತ್ತು. ಆಸ್ಕರ್ ಮನೆ ಅಂದ್ರೆ ಕಾಂಗ್ರೇಸ್ ಆಫೀಸ್, ಅಲ್ಲಿಗೆ ಬರದ ನಾಯಕರಿಲ್ಲ. ಸದ್ಯ ವಾಸವಿಲ್ಲದೆ ಮನೆ ಪಾಳು ಬಿದ್ದರೂ ಜನಾಕರ್ಷಣೆ ಉಳಿಸಿಕೊಂಡಿದೆ. ಈ ಮನೆ ಆವರಣದಲ್ಲಿ ನಮ್ಮ ಉಡುಪಿ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.

ಆಸ್ಕರ್ ನಿಧನಕ್ಕೆ ಗಣ್ಯರ ಸಂತಾಪ

ಕಳೆದ ಹಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್(80) ನಿಧನರಾಗಿದ್ದಾರೆ.  ಮಂಗಳೂರಿನ ಯೆನೇಪೋಯಾ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆಗೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

Video Top Stories