ವಿಪಕ್ಷ ನಾಯಕನ ಆಯ್ಕೆ ವಿಚಾರ ಪಕ್ಷದ ಸಭೆಯಲ್ಲೇ ಚರ್ಚೆಯಾಗ್ಲಿ; ಕಟೀಲ್‌ ವಿರುದ್ಧ ತಿರುಗಿಬಿದ್ದ ಬಿಜೆಪಿ ಶಾಸಕರು!

ಬಿಜೆಪಿ ರಾಜ್ಯಾಧ್ಯಕ್ಷರ ಸೂಚನೆಗೆ ಶಾಸಕರು ಒಪ್ಪಿಲ್ಲ. ಆಂತರಿಕವಾಗಿ ಯಾಕೆ? ಪಕ್ಷದ ಸಭೆಯಲ್ಲೇ ಚರ್ಚೆಯಾಗ್ಲಿ ಎಂದಿದ್ದಾರೆ ಎಂದು ತಿಳಿದುಬಂದಿದೆ.

First Published Jun 10, 2023, 1:00 PM IST | Last Updated Jun 10, 2023, 1:06 PM IST

ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಬಂದು 4 ವಾರಗಳು ಕಳೆದಿದ್ರೂ, ವಿಪಕ್ಷ ನಾಯಕನ ಆಯ್ಕೆಗೆ ಬಿಜೆಪಿ ನಾಯಕರ ಕಸರತ್ತು ಮುಂದುವರೆದಿದೆ. ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ಹೇಗೆ? ಯಾವಾಗ? ಅನ್ನೋ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ನಿನ್ನೆ ಬಿಜೆಪಿ ಆತ್ಮಾವಲೋಕನಸಭೆ ನಡೆದ್ರೂ ಈ ಬಗ್ಗೆ ಚರ್ಚೆಯಾಗಿಲ್ಲ ಎಂದು ತಿಳಿದುಬಂದಿದೆ. ಆದರೂ, ನಿಮ್ಮ ಆಂತರಿಕ ಅಭಿಪ್ರಾಯ ಹೇಳಿ ಎಂದು ಶಾಸಕರಿಗೆ ಕಟೀಲ್‌ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ. ಅರುಣ್‌ ಸಿಂಗ್ ಬಳಿ ಪ್ರತ್ಯೇಕವಾಗಿ ಹೇಳಲು ಸೂಚನೆ ನೀಡಲಾಗಿದೆ ಎಂದೂ ಹೇಳಿದ್ದಾರೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷರ ಸೂಚನೆಗೆ ಶಾಸಕರು ಒಪ್ಪಿಲ್ಲ. ಆಂತರಿಕವಾಗಿ ಯಾಕೆ? ಪಕ್ಷದ ಸಭೆಯಲ್ಲೇ ಚರ್ಚೆಯಾಗ್ಲಿ ಎಂದಿದ್ದಾರೆ ಎಂದು ತಿಳಿದುಬಂದಿದೆ.