Belagavi Politics : ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ : ಬೆಳಗಾವಿ ರಾಜಕೀಯದಲ್ಲಿ ಹೊಸ ಟ್ವಿಸ್ಟ್..?

  ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಇದೀಗ ಶಾಸಕ ರಮೇಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಲಖನ್ ಜಾರಕಿಹೊಳಿ ಇಲ್ಲಿಗೆಲುವು ಸಾಧಿಸಿದ್ದು,  ಬಿಜೆಪಿಗೆ ಸೇರ್ಪಡೆ ಆಗ್ತಾರಾ ಲಖನ್ ಜಾರಕಿಹೊಳಿ ಎನ್ನುವ ಪ್ರಶ್ನೆ  ಮೂಡಿದೆ.  

Share this Video
  • FB
  • Linkdin
  • Whatsapp

 ಬೆಂಗಳೂರು (ಡಿ.15): ವಿಧಾನ ಪರಿಷತ್ ಚುನಾವಣಾ (MLC Election) ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಇದೀಗ ಶಾಸಕ ರಮೇಶ್ ಜಾರಕಿಹೊಳಿ (Ramesg Jarkiholi) ಬೆಳಗಾವಿಯಲ್ಲಿ (Belagavi) ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಲಖನ್ ಜಾರಕಿಹೊಳಿ(Lakan Jarkiholi) ಇಲ್ಲಿಗೆಲುವು ಸಾಧಿಸಿದ್ದು, ಬಿಜೆಪಿಗೆ ಸೇರ್ಪಡೆ ಆಗ್ತಾರಾ ಲಖನ್ ಜಾರಕಿಹೊಳಿ ಎನ್ನುವ ಪ್ರಶ್ನೆ ಮೂಡಿದೆ. 

Council Election Karnataka : ಬಿಜೆಪಿಗರ ಕೆಂಗಣ್ಣಿಗೆ ಗುರಿಯಾದ ರಮೇಶ್‌ ಜಾರಕಿಹೊಳಿ ?

ಬಿಜೆಪಿ (BJP) ಸೋಲು ಕಂಡಿದ್ದು, ಈ ನಿಟ್ಟಿನಲ್ಲಿ ಜಾರಕಿಹೊಳಿ ವಿರುದ್ಧ ಕಮಲ ಪಾಳಯದ ಮುಖಂಡರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಜಾರಕಿಹೊಳಿ ವಿರುದ್ಧ ಕ್ರಮಸಾಧ್ಯತೆ ಕಡಿಮೆ ಎಂದು ಕೆಲ ಮೂಲಗಳು ಹೇಳುತ್ತಿವೆ. ಅಲ್ಲದೇ ಬಿಜೆಪಿ ಮುಖಂಡರು ತಮಗೆ ಕರೆ ಮಾಡಿ ಯಾವುದೇ ವಿಚಾರವನ್ನು ಮಾತನಾಡದಂತೆ ಸೂಚನೆ ನೀಡಿದ್ದಾಗಿಯೂ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. 

Related Video