ಯಾರೂ ಡಿಕೆಶಿ ಮಾತಿಗೆ ಬಲಿಯಾಗಲ್ಲ, ಹೋಗುವವರನ್ನು ಗೌರವಯುತವಾಗಿ ಕಳಿಸ್ತೇವೆ: ಯಡಿಯೂರಪ್ಪ
ಬಿಜೆಪಿಯಲ್ಲಿ ಹಾಲಿ ನಾಲ್ಕೈದು ಶಾಸಕರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ. ಯಾರೊಬ್ಬರೂ ಡಿ.ಕೆ. ಶಿವಕುಮಾರ್ ಮ ಆತಿಗೆ ಬಲಿಯಾಗಲ್ಲ. ಆದರೆ, ಹೋಗುವವರನ್ನು ನಾವು ಗೌರವಯುತವಾಗಿ ಕಳಿಸಿಕೊಡುತ್ತೇವೆ. ಇನ್ನು ಸಾಕಷ್ಟು ಜನರು ಬರಲು ಸಿದ್ಧರಾಗಿದ್ದಾರೆ.
ಬೆಂಗಳೂರು (ಮಾ.08): ಬಿಜೆಪಿಯಲ್ಲಿ ಹಾಲಿ ನಾಲ್ಕೈದು ಶಾಸಕರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ. ಯಾರೊಬ್ಬರೂ ಡಿ.ಕೆ. ಶಿವಕುಮಾರ್ ಮ ಆತಿಗೆ ಬಲಿಯಾಗಲ್ಲ. ಆದರೆ, ಹೋಗುವವರನ್ನು ನಾವು ಗೌರವಯುತವಾಗಿ ಕಳಿಸಿಕೊಡುತ್ತೇವೆ. ಇನ್ನು ಸಾಕಷ್ಟು ಜನರು ಬರಲು ಸಿದ್ಧರಾಗಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಬಿಜೆಪಿ ಟಿಕೆಟ್ ಹಂಚಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಬಿಜೆಪಿ ಪರ ಅಲೆ ಜೋರಾಗಿದೆ. 140ಕ್ಕೂ ಹೆಚ್ಚು ಸ್ಥಾನ ಗೆದ್ದು ಮತ್ತೆ ಅಧಿಕಾರ ಹಿಡಿಯುತ್ತೇವೆ ಎಂದರು.
ಟಿಕೆಟ್ ಹಂಚಿಕೆ ವಿಷಯದಲ್ಲಿಯೂ ಕಟ್ಟುನಿಟ್ಟಿನ ಮಾನದಂಡಗಳನ್ನು ಅನುಸರಿಸಲಾಗುವುದು. ಟಿಕೆಟ್ ಹಂಚಿಕೆಯಲ್ಲಿ ಗುಜರಾತ್ ಮಾದರಿ ಅನ್ನೋದಕ್ಕಿಂತ ಪಕ್ಷದ ಹೈಕಮಾಂಡ್ ಹಾಲಿ ಶಾಸಕರೆಲ್ಲರ ಚಲನ ವಲನ ಗಮನಿಸುತ್ತಿದೆ. ಇದನ್ನಾಧರಿಸಿ ಹೇಳೋದಾದಲ್ಲಿ ಹಾಲಿ ನಾಲ್ಕೈದು ಶಾಸಕರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿಯ ಉಮೇದುವಾರರ ಮೊದಲ ಪಟ್ಟಿ ಶೀಘ್ರವೇ ಹೊರಬೀಳುತ್ತದೆ. ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಚುನಾವಣೆ ಮುಗಿದ ಬಳಿಕ ನಡೆಯುವ ಶಾಸಕಾಂಗ ಸಭೆಯಲ್ಲಿ ಸಿಎಂ ಅಭ್ಯರ್ಥಿ ಯಾರಾಗಬೇಕು ಎಂಬ ನಿರ್ಧಾರವಾಗಲಿದೆ ಎಂದರು.