ಪೂರ್ಣ ಬಹುಮತದೊಂದಿಗೆ ಮತ್ತೆ ಸರ್ಕಾರ ರಚನೆ: ಸುನೀಲ್ ಕುಮಾರ್ ವಿಶ್ವಾಸ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು, ಪೂರ್ಣ ಬಹುಮತದ ಸರ್ಕಾರವನ್ನು ರಚನೆ ಮಾಡುತ್ತೇವೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

First Published Feb 23, 2023, 11:19 AM IST | Last Updated Feb 23, 2023, 3:06 PM IST

ಯಾವುದೇ ಅಳುಕು ಇಲ್ಲದೆ ಚುನಾವಣೆಗೆ ಹೋಗುತ್ತಿದ್ದೇವೆ. ಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ಸರ್ಕಾರವನ್ನು ಬಿಜೆಪಿ ರಚನೆ ಮಾಡುತ್ತದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ. ರಾಜ್ಯದಲ್ಲಿ ಮತ್ತ ಕೇಂದ್ರದಲ್ಲಿ ಎರಡು ಸರ್ಕಾರ ಬಂದ ನಂತರ ಬಹಳ ದೊಡ್ಡ ಪ್ರಮಾಣದಲ್ಲಿ ಜನರಿಗೆ ತಲುಪುವ ಹತ್ತಾರು ಯೋಜನೆಗಳನ್ನು ನಮ್ಮ ಸರ್ಕಾರ ಕೊಟ್ಟಿದೆ. ರೈತ ವಿದ್ಯಾ ನಿಧಿಯಿಂದ ಹಿಡಿದು ಹಕ್ಕು ಪತ್ರ ಕೊಡುವ ತನಕ ಹತ್ತಾರು ಯೋಜನೆಗಳು ಜನಮಾನಸದಲ್ಲಿ ಕೂರುವಂತ ಪ್ರಯತ್ನವಾಗಿದೆ. ಜನರಿಗೆ ಇದ್ದಂತ ನೀರಿಕ್ಷೆಗಳನ್ನು ನಮ್ಮ ಸರ್ಕಾರ ಮಾಡಿದೆ. ನೂರರಷ್ಟು ಕೆಲಸವನ್ನು ಮಾಡಿದ್ದೇವೆ ಎಂದು ಹೇಳುತ್ತಿಲ್ಲ, ಶೇ.80ರಷ್ಟು ತಲುಪಿದ್ದೇವೆ. ಕಾಂಗ್ರೆಸ್‌ ಅಥವಾ ಜೆಡಿಸ್‌ ಹೋಲಿಕೆ ಮಾಡಿದ್ರೆ ಅತ್ಯಂತ ವೇಗವಾಗಿ ಯೋಜನೆ ತಲುಪಿಸುವಂತ ಕಾರ್ಯ ಬಿಜೆಪಿಯಿಂದ ಆಗಿದೆ ಎಂದು ಸುನೀಲ್‌ ಕುಮಾರ್‌ ಹೇಳಿದ್ದಾರೆ.

ಸಿಂ'ಹಾಸನ' ಅಖಾಡಕ್ಕೆ ಭವಾನಿ ರೇವಣ್ಣ ಎಂಟ್ರಿ: ಟಿಕೆಟ್‌ ಫೈನಲ್‌'ಗೂ ಮುನ್ನ ಭರ್ಜರಿ ಪ್ರಚಾರ