Asianet Suvarna News Asianet Suvarna News

News Hour Special: ಡಿ ಕೆ‌ ಶಿವಕುಮಾರ್- ಸಿದ್ದರಾಮಯ್ಯರನ್ನ ಜೋಡಿಸುತ್ತಾ ಭಾರತ್ ಜೋಡೋ?

News Hour Special With DK Shivakumar: ಡಿಕೆಶಿ-ಸಿದ್ದರಾಮಯ್ಯನವರನ್ನ ಜೋಡಿಸುತ್ತಾ ಭಾರತ್ ಜೋಡೋ? ಭಾರತ್ ಜೋಡೋಗಾಗಿ ರಾಜ್ಯಾದ್ಯಂತ ಓಡಾಡಿದ್ದು ಡಿಕೆಶಿ ಒಬ್ವರೇನಾ? 

Oct 4, 2022, 2:29 PM IST

ಬೆಂಗಳೂರು (ಅ. 04): ದೇಶದಲ್ಲಿ ಒಗ್ಗಟ್ಟು ಮೂಡಿಸುವ ಅಭಿಲಾಷೆಯೊಂದಿಗೆ ತಮಿಳುನಾಡಿನ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್‌ ಜೋಡೋ (Bharat Jodo Yatra) ಹೆಸರಲ್ಲಿ ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್‌ (Congress) ವರಿಷ್ಠ ರಾಹುಲ್‌ ಗಾಂಧಿ (Rahul Gandhi)  ಕೇರಳದಲ್ಲಿ ಯಾತ್ರೆ ನಡೆಸಿ ಕರ್ನಾಟಕ ಪ್ರವೇಶಿಸಿದ್ದಾರೆ. ರಾಹುಲ್‌ ಗಾಂಧಿ 'ಭಾರತ್‌ ಜೋಡೋ' ಯಾತ್ರೆಗೆ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ.  ಮೇಲ್ನೋಟಕ್ಕೆ ಈ ಯಾತ್ರೆ ದೇಶ ಒಗ್ಗೂಡಿಸುವ ಉದ್ದೇಶದ್ದು ಎಂದು ಹೇಳಲಾಗುತ್ತಿದ್ದರೂ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ ಯಾತ್ರೆ ನಡೆಸುತ್ತಿದೆ ಎನ್ನಲಾಗಿದೆ.  ತನ್ಮೂಲಕ ಯಾತ್ರೆ ನೆಪದಲ್ಲಿ ದೊಡ್ಡ ರಾಜಕೀಯ ಮೇಲಾಟ ನಡೆಯುತ್ತಿದೆ. 

ರಾಹುಲ್‌ ಗಾಂಧಿ 'ಭಾರತ್‌ ಜೋಡೋ' ಯಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲೊಬ್ಬರಾದ ಕೆಪಿಸಿಸಿ ಅಧ್ಯಕ್‌ ಡಿ ಕೆ ಶಿವಕುಮಾರ್‌ (D K Shivakumar) ಈ ವಾರದ ಏಷ್ಯಾನೆಟ್‌ ಸುವರ್ಣ ನ್ಯೂಸಿನ ನ್ಯೂಸ್‌ ಅವರ್‌ ಸ್ಪೇಷಲ್‌ನಲ್ಲಿ ನಮ್ಮ ಪ್ರಶ್ನೆಗಳಿಗೆ ಹಾಗೂ ವಿಪಕ್ಷಗಳ ನಾಯಕರ ಪ್ರಶ್ನೆಗೆ ಉತ್ತರಿಸಿದ್ದಾರೆ.   ಡಿಕೆಶಿ-ಸಿದ್ದರಾಮಯ್ಯನವರನ್ನ (Siddaramaiah) ಜೋಡಿಸುತ್ತಾ ಭಾರತ್ ಜೋಡೋ? ಭಾರತ್ ಜೋಡೋಗಾಗಿ ರಾಜ್ಯಾದ್ಯಂತ ಓಡಾಡಿದ್ದು ಡಿಕೆಶಿ ಒಬ್ವರೇನಾ? ಸಿದ್ದರಾಮಯ್ಯ ನಿಲುವು, ಡಿಕೆಶಿ ನಿಲುವುಗಳು ತದ್ವಿರುದ್ಧ ಯಾಕೆ? ಪೇ ಸಿಎಂ ಅಭಿಯಾನ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ತಂದುಕೊಡುತ್ತಾ? ಈ ಎಲ್ಲ ಪ್ರಶ್ನೆಗಳಿಗೆ ಕನಕಪುರ ಬಂಡೆ ಡಿಕೆ ಶಿವಕುಮಾರ್‌ ಉತ್ತರಿಸಿದ್ದಾರೆ.  

ನಾನು ಸಿದ್ದು ಒಂದಾಗಿದ್ದೇವೆ, ಬಿಜೆಪಿ ಆಟ 6 ತಿಂಗಳಷ್ಟೇ: ಡಿಕೆಶಿ