ನ್ಯೂಸ್ ಅವರ್‌ ಸ್ಪೆಷಲ್‌: ಇಲ್ಲಿದೆ ರಿಯಲ್‌ ಸ್ಟಾರ್ ಅನ್‌ಎಡಿಟೆಡ್ ಟಾಕ್‌..

ನ್ಯೂಸ್‌ ಅವರ್ ಸ್ಪೆಶಲ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ-ರಾಜಕಾರಣಿ ಉಪೇಂದ್ರ ಹತ್ತು ಹಲವಾರು ವಿಚಾರಗಳ ಬಗ್ಗೆ ಸಂವಾದ ನಡೆಸಿದರು.  

First Published Mar 24, 2023, 3:25 PM IST | Last Updated Mar 24, 2023, 3:25 PM IST

ನ್ಯೂಸ್‌ ಅವರ್ ಸ್ಪೆಶಲ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ-ರಾಜಕಾರಣಿ ಉಪೇಂದ್ರ ಹತ್ತು ಹಲವಾರು ವಿಚಾರಗಳ ಬಗ್ಗೆ ಸಂವಾದ ನಡೆಸಿದರು.  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು  ರಾಜಕಾರಣ ಅನ್ನುವುದು ಬ್ಯುಸಿನೆಸ್‌ ಆಗಿದೆ ಹಣ ರಹಿತವಾದ ವ್ಯವಸ್ಥೆ ಕರ್ನಾಟಕದಲ್ಲಿ ಬರಬೇಕು , ಜನಗಳು ಭಾಗಿಯಾದರೆ ಮಾತ್ರ ದೇಶ ಚೆನ್ನಾಗಿ ಇರುತ್ತದೆ, ದೇಶ ಅಂದ್ರೆ ಜನ ದೇಶ ಉದ್ದಾರ ಆಗೋದು ಅಂದ್ರೆ ಜನರು ಉದ್ದಾರ ಆಗೋದು ಎಂದು ಹೇಳಿದರು. ಪ್ರತಿಯೋಬ್ಬರು ಸ್ವತಃ ಬದಲಾವಣೆಯಾಗಬೇಕು ಯಾರೋ ಬಂದು ನಮ್ಮನ್ನು ಬದಲಾಣೆ ಮಾಡುತ್ತಾರೆ ಅನ್ನುವುದು ಸುಳ್ಳು, ನಾನು ಪಕ್ಷವನ್ನು ಆರಂಭಿಸಿದ್ದಾಗ ಸಾವಿರ ಜನ ಇದ್ರು ಆಮೇಲೆ ನಾನು ಒಬ್ಬನೆ , ಇದರಿಂದ ನಾನು ಹೆದರಲಿಲ್ಲ ಯಾಕಂದ್ರೆ ನನಗೆ ಸೋಲು ಗೆಲುವಿನ ಭಯವೇ ಇಲ್ಲ, ನನಗೆ ಅವಮಾನ, ಅಹಂಕಾರಗಳಿಲ್ಲ ಎಂದು ತಿಳಿಸಿದರು. ಹಾಗೇ ದೇಶವನ್ನೇ ಬದಲಾಯಿಸುತ್ತೆನೆ ಎನ್ನುವ ಮೂರ್ಖತನವಿಲ್ಲ. ನಾಯಕರು ಗೆಲ್ಲುತ್ತಾನೆ ಇದ್ದಾರೆ ಆದ್ರೆ ಜನ ಯಾವಾಗ ಗೆಲ್ಲುವುದು ಎಂದು ಪ್ರಶ್ನಿಸಿದ್ದಾರೆ.