Asianet Suvarna News Asianet Suvarna News

ಒಂದಾಗುತ್ತಾ ಹಳೇದೋಸ್ತಿ, ಕಾಂಗ್ರೆಸ್ ಗೆ ಓಪನ್ ಆಫರ್ ನೀಡಿದ ಜೆಡಿಎಸ್!

ರಾಜ್ಯದಲ್ಲಿ ರಾಜ್ಯಸಭೆ ಚುನಾವಣೆ ಕಾವು ಜೋರಾಗಿದೆ. ಇದರ ನಡುವೆ ಬಿಜೆಪಿಯನ್ನು ಅಧಿಕಾರದಿಂದ ತಡೆಯುವ ನಿಟ್ಟಿನಲ್ಲಿ ಕುಮಾರಸ್ವಾಮಿ ತಮ್ಮ ಹಳೆಯ ದೋಸ್ತಿ ಕಾಂಗ್ರೆಸ್ ಗೆ ಓಪನ್ ಆಫರ್ ಅನ್ನು ನೀಡಿರುವುದು ಬುಧವಾರ ಜೋರು ಸುದ್ದಿ ಮಾಡಿತ್ತು.
 

ಬೆಂಗಳೂರು (ಜೂನ್ 8): ರಾಜ್ಯಸಭೆ ಹಣಾಹಣಿಗೆ (Rajya sabha Polls) ರಾಜ್ಯ ಸಿದ್ಧವಾಗಿದೆ. ಜೆಡಿಎಸ್ (JDS) ಹಾಗೂ ಕಾಂಗ್ರೆಸ್ (Congress) ನಡುವೆ ಅಂತಿಮ ಹಂತದ ಮಾತುಕತೆಗಳು ನಡೆಯುತ್ತಿದ್ದು, ಕುಪೇಂದ್ರ ರೆಡ್ಡಿ (Kupendra Reddy) ಯಾವ ಕ್ಷಣದಲ್ಲಿ ಬೇಕಾದರೂ ಕಣದಿಂದ ಹಿಂದೆ ಸರಿಯಬಹುದು ಎಂದು ಸುದ್ದಿಯಾಗಿತ್ತು. ಆದರೆ, ಈ ಸುದ್ದಿ ಕುಮಾರಸ್ವಾಮಿ ಹಾಗೂ ರೇವಣ್ಣನವರಿಗೆ ಸಿಟ್ಟು ತರಿಸಿತ್ತು.

ಇನ್ನೊಂದೆಡೆ, ಬಿಜೆಪಿ ಸರ್ಕಾರವನ್ನು ತೆಗೆಯಲು ಕುಮಾರಸ್ವಾಮಿ ಕಾಂಗ್ರೆಸ್ ಗೆ ಓಪನ್ ಆಫರ್ ನೀಡಿದ್ದಾರೆ. "ಇವತ್ತಿನಿಂದಲೇ ಎಲ್ಲವನ್ನೂ ಮರೆತುಬಿಡುತ್ತೇನೆ. ನಾನು ಎಲ್ಲದಕ್ಕೂ ತಯಾರಿದ್ದೇನೆ. ಕಾಂಗ್ರೆಸ್ ನಾಯಕರನ್ನು ಕಳಿಸುತ್ತೇನೆ ಎಂದವರು ಇಲ್ಲಿಯವರೆಗೂ ಕಳಿಸಿಲ್ಲ.ನಾಳೆ ಮಧ್ಯಾಹ್ನದ ಒಳಗಾಗಿ ಎಲ್ಲವೂ ತಿಳಿಯುತ್ತದೆ' ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ. ಅದರೊಂದಿಗೆ ಕೊನೇ ಕ್ಷಣದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಆಗಬಹುದು ಎನ್ನುವ ಸೂಚನೆಯನ್ನೂ ರವಾನಿಸಿದ್ದಾರೆ.

'ಇವತ್ತು ದೇವಸ್ಥಾನದಲ್ಲಿ ನಾನು ಡಿಸೈಡ್​ ಮಾಡಿ ಹೋಗ್ತೇನೆ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗೇ ಆಗ್ತಾರೆ'

ಇನ್ನೊಂದೆಡೆ ಪಠ್ಯಪುಸ್ತಕ ವಿವಾದದಲ್ಲಿ ಮತ್ತೊಂದಿಷ್ಟು ಬೆಳವಣಿಗೆಯಾಗಿದೆ. ಮುಂಬೈ ದಾಳಿ ವೇಳೆ ಹುತಾತ್ಮರಾದ ಉಣ್ಣಿಕೃಷ್ಣನ್ ಅವರ ಪಠ್ಯವನ್ನು ಬರಗೂರು ರಾಮಚಂದ್ರಪ್ಪನವರ ಸಮಿತಿ ಕೈಬಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಬರಗೂರು ಸಮಿತಿ ಅಂದಿನ ಸಿದ್ದರಾಮಯ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ ಎನ್ನುವುದು ತಿಳಿದುಬಂದಿದೆ.ಪಠ್ಯ ಪರಿಷ್ಕರಣೆಯಲ್ಲಿ ಯಾವುದೇ ಲೋಪವಿದ್ದರೆ ಸರಿಮಾಡುತ್ತೇವೆ. ನಮ್ಮ ಪರಿಷ್ಕರಣೆಯಲ್ಲಿ ಯಾವುದೇ ತಪ್ಪಿದ್ದರೆ ಸರಿಮಾಡುತ್ತೇವೆ, ಆದರೆ ಕುವೆಂಪು ಅವಮಾನ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ ಎಂದಿದ್ದಾರೆ.