News Hour; ಮೇಲ್ಮನೆಗೆ ಯಾವ ಪಕ್ಷದಿಂದ ಯಾರು? ಕ್ಷಮೆ ಕೇಳಿದ ಹಂಸಲೇಖ
* ಪರಿಷತ್ ಫೈಟ್, ನಾಯಕರ ಮನೆಗೆ ಆಕಾಂಕ್ಷಿಗಳ ದಂಡು
* ಬಾರ್ ವಿರೋಧಿಸಿದವರ ಮೇಲೆಯೇ ಹಲ್ಲೆ ಮಾಡಿದ ಪೊಲೀಸರು!
* ಕ್ಷಮೆ ಕೇಳಿದ ಹಂಸಲೇಖ, ಮುಗಿದಿಲ್ಲ ವಿವಾದ
* ಬಿಟ್ ಕಾಯಿನ್ ನಲ್ಲಿ ಉತ್ತರ ಸಿಗದ ಪ್ರಶ್ನೆಗಳು
ಬೆಂಗಳೂರು(ನ. 15) ವಿಧಾನ ಪರಿಷತ್ (Karnataka legislative council ) ಪ್ರವೇಶಕ್ಕಾಗಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗುತ್ತಲೇ ಇದೆ. ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮನೆಗೆ ಅನಿಲ್ ಲಾಡ್ (Anil Lad) ಆಗಮಿಸಿದ್ದರು. ಎಲ್ಲ ಪಕ್ಷದಲ್ಲಿಯೂ ಮೇಲ್ಮನೆ ಪ್ರವೇಶಕ್ಕೆ ಅರ್ಜಿಗಳು ಬರುತ್ತಲೆ ಇವೆ. ಬಾರ್ ಬೇಡ, ಮನೆಯವರೆಲ್ಲ ಮದ್ಯದ ದಾಸರಾಗುತ್ತಾರೆ ಎಂದು ಹೇಳಿ ಪ್ರತಿಭಟನೆ ನಡೆಸಿದವರನ್ನೇ ಅರೆಸ್ಟ್ ಮಾಡಲಾಗಿದೆ. ಪ್ರತಿಭಟನೆ ನಡೆಸಿದವರ ಮನೆ ಮೇಲೆ (Chikkamagalur) ಪೊಲೀಸರೆ ದಾಳಿ ಮಾಡಿದ್ದಾರೆ
ಹಂಸಲೇಖ ಪತ್ನಿಗೆ ಅಭಿನಂದನೆ ಹೇಳಿದ ಸುರೇಶ್ ಕುಮಾರ್
ಪೇಜಾವರ ಹಿರಿಯ ಸ್ವಾಮೀಜಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಕ್ಷಮೆ ಯಾಚಿಸಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಪರ ಮತ್ತು ವಿರೋಧದ ಚರ್ಚೆ ನಿಂತಿಲ್ಲ. ಬಿಟ್ ಕಾಯುನ್(Bitcoin Scam) ಪ್ರಕರಣದ ಸದ್ದು ಅಡಗಿಲ್ಲ ಆದರೆ ಒಂದಿಷ್ಟು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರವೂ ಸಿಕ್ಕಿಲ್ಲ