News Hour: ಯುವನಿಧಿ ಹೆಸರಲ್ಲಿ ರಾಹುಲ್ ಗಾಂಧಿ ರಣಕಹಳೆ

ಕಾಂಗ್ರೆಸ್‌ನ ಯುವರಾಜ ರಾಹುಲ್‌ ಗಾಂಧಿ ಬೆಳಗಾವಿಯಲ್ಲಿ ಕಾಂಗ್ರೆಸ್‌ನ ನಾಲ್ಕನೇ ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ನಿರುದ್ಯೋಗಿ ಪದವೀಧರರಿಗೆ 3 ಸಾವಿರ, ಡಿಪ್ಲೋಮಾ ಮಾಡಿದವರಿಗೆ ಒಂದೂವರೆ ಸಾವಿರ ಭತ್ಯೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

First Published Mar 20, 2023, 11:34 PM IST | Last Updated Mar 20, 2023, 11:34 PM IST

ಬೆಂಗಳೂರು (ಮಾ.20): ಚುನಾವಣೆ ಸಮೀಪವಾಗುತ್ತಿರುವಂತೆ ಕಾಂಗ್ರೆಸ್‌ ಮತ್ತೊಂದು ಉಚಿತಾಸ್ತ್ರ ಘೋಷಣೆ ಮಾಡಿದೆ.  ಯುವ ನಿಧಿ ಹೆಸರಲ್ಲಿ ಕಾಂಗ್ರೆಸ್‌ ಪಕ್ಷದ ನಾಲ್ಕನೇ ಗ್ಯಾರಂಟಿಯನ್ನು ರಾಹುಲ್‌ ಗಾಂಧಿ ಅನಾವರಣ ಮಾಡಿದರು. ಈ ವೇಳೆ ಎಂದಿನಂತೆ ರಾಜ್ಯ ಬಿಜೆಪಿ ಸರ್ಕಾರ ಹಾಗೂ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದರು.

ಆ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್‌, ಈ ಭೂಮಿಯಿಂದಲೇ ಬಿಜೆಪಿ ಭ್ರಷ್ಟ ಸರ್ಕಾರ ಓಡಿಸಬೇಕು. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಎಲ್ಲಾ ಜನರ ರಕ್ಷಣೆ ಮಾಡೋದು ನಮ್ಮ ನಿಮ್ಮೆಲ್ಲರ ಕರ್ತವ್ಯ ಈ ಸಮಾವೇಶದಲ್ಲಿದ್ದ ನಾಲ್ಕರಷ್ಟು ಜನರು ಹೊರಗೆ ನಿಂತಿದ್ದಾರೆ. ಯುವಕರಿಗೆ ರಕ್ಷಣೆ ನೀಡಲು ರಾಹುಲ್ ಗಾಂಧಿ ಬಂದಿದ್ದಾರೆ. ಯುವಕರಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಕಾಂಗ್ರಸ್ ಸಂಕಲ್ಪ ಎಂದು ಹೇಳಿದರು.

ರಾಹುಲ್‌ ಗಾಂಧಿಯಿಂದ ಯುವಕರಿಗೆ 2 ಘೋಷಣೆ: ಸತೀಶ ಜಾರಕಿಹೊಳಿ

'ಬಿಜೆಪಿ ಪಾರ್ಟಿ ಕಿತ್ತೊಗೆಯಲು ನೀವೆಲ್ಲಾ ಶಪಥ ಮಾಡಬೇಕು. 18 ವರ್ಷದವರಿಗೆ ವೋಟ್ ಹಕ್ಕು ಕೊಟ್ಟಿದ್ದು ರಾಜೀವ್ ಗಾಂಧಿ. ಕಂಪ್ಯೂಟರ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದು ರಾಜೀವ್ ಗಾಂಧಿ. ನಮ್ಮದು ಡಬಲ್ ಎಂಜಿನ್ ಸರ್ಕಾರ ಅಂತಾರೆ 9 ವರ್ಷದಲ್ಲಿ ಮೋದಿ ಯುವಕರಿಗೆ ಏನ್ ಮಾಡಿದರು. ರಾಜ್ಯದಲ್ಲಿ ಪ್ರವಾಹ ಬಂದಾಗ ಮೋದಿ ಬರಲಿಲ್ಲ ಎಂದು ಸಿದ್ಧರಾಮಯ್ಯ ಟೀಕೆ ಮಾಡಿದರು.