LRC ಮತ್ತೆ ಭಾರತ ಆಳುವ ಕನಸು ಬಿಟ್ಟುಬಿಡಿ, RSS ಮುಖ್ಯಸ್ಥರ ಮಾತಿಗೆ ಮುಸ್ಲಿಮ್ ನಾಯಕರು ಕೆಂಡ!
ಭಾರತದಲ್ಲಿ ಮುಸ್ಲಿಮರಿಗೆ ಯಾವುದೇ ಭಯವಿಲ್ಲ, ಮುಸ್ಲಿಮರಾಗಿ ಇರಬಹುದು, ಮತ್ತೆ ಘರ್ ವಾಪ್ಸಿ ಆಗಬಹುದು. ಆದರೆ ಮತ್ತೆ ಆಳಬಹುದು ಅನ್ನೋ ಕನಸು ಬಿಟ್ಟುಬಿಡಿ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಈ ಹೇಳಿಕೆಗೆ ಮುಸ್ಲಿಮ್ ನಾಯಕರ ಅಭಿಪ್ರಾಯವೇನು? ಇಲ್ಲಿದೆ
ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಹೇಳಿಕೆ ಬಾರಿ ಚರ್ಚೆಗೆ ಗ್ರಾಸವಾಗಿದೆ. ಆರ್‌ಎಸ್ಎಸ್ ಮುಖವಾಣಿಗೆ ನೀಡಿದ ಸಂದರ್ಶನದಲ್ಲಿ ಭಾಗವತ್, ಮುಸ್ಲಿಮರು ಮತ್ತೆ ಭಾರತವನ್ನು ಆಳುವ ಕನಸು ಬಿಟ್ಟುಬಿಡಿ. ನಾವೇ ಶ್ರೇಷ್ಠ ಅನ್ನೋ ಭಾವನೆ ಬಿಟ್ಟು ಭಾರತದಲ್ಲಿ ಬದುಕಲಿ ಎಂದಿದ್ದಾರೆ. ಹಿಂದೂ ಸಮಾಜ ಮತ್ತೊಂದು ಯುದ್ಧದ ನಡುವೆ ಇದೆ. ಆದರೆ ಈ ಬಾರಿ ಯುದ್ಧ ಒಳಗಿನ ಶತ್ರಗಳ ವಿರುದ್ಧ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಭಾರತದಲ್ಲಿ ಮುಸ್ಲಿಮರಿಗೆ ಯಾವುದೇ ಭಯವಿಲ್ಲ. ಹಿಂದುಸ್ಥಾನ ಹಿಂದೂಸ್ಥಾನವಾಗಿಯೇ ಉಳಿಯಬೇಕು ಎಂದುಭಾಗವತ್ ಹೇಳಿದ್ದಾರೆ. ಮೋಹನ್ ಭಾಗವತ್ ಮಾತಿಗೆ ಮುಸ್ಲಿಮ್ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ಚರ್ಚೆಯಲ್ಲಿ ಹಿಂದೂ ಹಾಗೂ ಮುಸ್ಲಿಮ್ ನಾಯಕರ ಅಭಿಪ್ರಾಯಗಳೇನು? ಇಲ್ಲಿದೆ ಸಂಪೂರ್ಣ ವಿವರ.