
ಬಂಡಾಯದ ಬಿಸಿ,ಮೂರು ಪಕ್ಷಗಳಿಗೆ ತಲೆನೋವಾದ ಮೂಡಿಗೆರೆ ಕ್ಷೇತ್ರ
ಎಲೆಕ್ಷನ್‌ಗೂ ಮುನ್ನ ರಾಜಕೀಯ ಪಕ್ಷಗಳಿಗೆ ಬಂಡಾಯದ ಬಿಸಿ ತಲೆನೋವಾಗಿದ್ದು, ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಗಳಲ್ಲಿಆಂತರಿಕ ಕಲಹ ಜೋರಾಗಿದೆ.
ಎಲೆಕ್ಷನ್‌ಗೂ ಮುನ್ನ ರಾಜಕೀಯ ಪಕ್ಷಗಳಿಗೆ ಬಂಡಾಯದ ಬಿಸಿ ತಲೆನೋವಾಗಿದ್ದು, ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಗಳಲ್ಲಿಆಂತರಿಕ ಕಲಹ ಜೋರಾಗಿದೆ. ಹಾಗೆ ಟಿಕೆಟ್ ಘೋಷಣೆಗೂ ಮೊದಲೇ ಬಂಡಾಯದ ಸಭೆಗಳು ನಡೆಸುತ್ತಿದ್ದು, ಅಭ್ಯರ್ಥಿಗಳ ವಿರುದ್ಧ ಬಂಡಾಯ ಬಾವುಟವನ್ನು ಮುಖಂಡರು ಹಾರಿಸಿದ್ದಾರೆ. ಇನ್ನು ಹಾಲಿ ಶಾಸಕ ಕುಮಾರಸ್ವಾಮಿಗೆ ಬಿಜೆಪಿಯಲ್ಲೇ ವಿರೋಧವಿದೆ. ಕಾಂಗ್ರೆಸ್‌ನಲ್ಲಿ ನಯನ ಮೋಟಮ್ಮ ವಿರುದ್ಧ ಬಂಡಾಯ, ನಿಂಗಯ್ಯಗೆ ಜೆಡಿಎಸ್ ಟಿಕೆಟ್ ಘೋಷಣೆಯಾದರು ಬದಲಾವಣೆ ಮಾತು ಕೇಳಿಬರುತ್ತಿದೆ.