
ಹೊಸ ಬಾಂಬ್ ಸಿಡಿಸಿದ ರೇಣುಕಾಚಾರ್ಯ, ಅನ್ನ ಭಾಗ್ಯ ಜಾರಿಯಾದ್ರೂ ಮತ್ತೆ ಗೊಂದಲ!
ಜನರ ಖಾತೆಗೆ ಬಿದ್ದಿಲ್ಲ ಅನ್ನ ಭಾಗ್ಯ ದುಡ್ಡು, ಯಾವಾಗ ಅನ್ನೋದೇ ಗೊಂದಲ, ಸೋತ ಬಿಜೆಪಿಯಲ್ಲಿ ಬಣ ರಾಜಕೀಯ ಜೋರು, ಇನ್ನು ನಿಂತಿಲ್ಲ ವಾಕ್ಸಮರ, ಅರ್ಜಿ ಹಾಕಿದ ಫಲಾನುಭವಿಗಳಿಗೆ ಮಾತ್ರ ಫ್ರೀ ಕರೆಂಟ್, ಹಣದ ಬದಲು ಅಕ್ಕಿಯನ್ನೇ ನೀಡಿ, ಪಡಿತರ ವಿತರಕರ ಪ್ರತಿಭಟನೆ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಬಣ ರಾಜಕೀಯ ಜೋರಾಗಿದೆ. ನಾಯಕರು ತಮ್ಮದೇ ನಾಯಕರ ವಿರುದ್ಧವೇ ಹೇಳಿಕೆ ನೀಡುತ್ತಿದ್ದಾರೆ. ಇದರ ಪರಿಣಾಮ ಕಾಂಗ್ರೆಸ್ ಎದುರಿಸಲುು ಸಮರ್ಥ ವಿರೋಧ ಪಕ್ಷವೇ ಇಲ್ಲವಾಗಿದೆ.ಸಂಸದ ಪ್ರತಾಪ್ ಸಿಂಹ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಹೊಸ ಬಾಂಬ್ ಹಾಕಿದ್ದಾರೆ. ಇದೀಗ ಬಿಜೆಪಿ ಒಡೆದ ಮನೆಯಾಗಿದ್ದು, ನೋಟಿಸ್‌ಗೂ ಕೇರ್ ಮಾಡದೇ ನಾಯಕರು ಹೇಳಿಕೆ ನೀಡುತ್ತಲೇ ಇದ್ದಾರೆ. ಇತ್ತ ಇಂದಿನಿಂದ ಅನ್ನ ಭಾಗ್ಯ ಯೋಜನೆ ಇಂದಿನಿಂದ ಜಾರಿಯಾಗಿದೆ. ಕಾಂಗ್ರೆಸ್ ಸರ್ಕಾರ ಅಕ್ಕಿ ಬದಲು ಹಣ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಆದರೆ ಇಂದು ಯಾರ ಖಾತೆಗೂ ಹಣ ಬಿದ್ದಿಲ್ಲ. ಇದೀಗ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ.