ಲೋಕ ಸಮರಕ್ಕೂ ಮುನ್ನ ಸಿಡಿದೆದ್ದ ಅನಂತ್ ಕುಮಾರ್ ಹೆಗಡೆ; ಫೈರ್ ಬ್ರಾಂಡ್ ಜೊತೆ ನಿಲ್ಲದ ಕೇಸರಿ ಪಡೆ!

ಲೋಕಸಭಾ ಚನಾವಣೆಗೂ ಮುನ್ನ ಸಂಸದ ಅನಂತ ಕುಮಾರ್ ಹೆಗಡೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ. ಆದರೆ, ಕೇಸರಿ ಪಡೆ ಅವರ ಬೆಂಬಲಕ್ಕೆ ನಿಲ್ಲದೇ ಕೈಬಿಟ್ಟಿದ್ದಾರೆ.
 

First Published Jan 17, 2024, 7:21 PM IST | Last Updated Jan 17, 2024, 7:21 PM IST

ಬೆಂಗಳೂರು (ಜ.17): ರಾಜ್ಯದಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಸಂಸದ ಅನಂತ ಕುಮಾರ್ ಹೆಗಡೆ ಹಚ್ಚಿದ ವಿವಾದದ ಬೆಂಕಿಗೆ, ಕಾಂಗ್ರೆಸ್ ಪಾಳಯವೇ ತಿರುಗಿ ಬಿದ್ದಿದೆ. ಅನಂತ್ ಕುಮಾರ್ ವಿರುದ್ಧ ಕೈ ಯುದ್ಧ, ಮತ್ತೆ ಸಿದ್ದುಗೆ ಸವಾಲಾಗಿದೆ. ಇನ್ನು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದರಿಂದ ಕಾಂಗ್ರೆಸ್‌ ನಾಯಕರು ವೈಲೆಂಟ್ ಆಗಿದ್ದರೂ, ಬಿಜೆಪಿ ನಾಯಕರು ಮಾತ್ರ ಸೈಲೆಂಟ್ ಆಗಿದ್ದಾರೆ. ಹೀಗಾಗಿ, ಸಂಸದ ಅನಂತ್ ಹೆಗಡೆ ಏಕಾಂಗಿಯಾಗಿಯೇ ಯುದ್ಧಕ್ಕೆ ಸನ್ನದ್ಧರಾಗಿದ್ದಾರೆ.

ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಲೋಕಸಭಾ ಚುನಾವಣೆ ಹತ್ತಿರವಾಗ್ತಾ ಇದ್ದ ಹಾಗೇ ಮತ್ತೆ ತಮ್ಮ ಹಳೆ ಶೈಲಿಯಲ್ಲಿ ಆಕ್ಟೀವ್ ಆಗಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಮಗನೆ ಅನ್ನೋ ಶಬ್ದ ಪ್ರಯೋಗಿಸಿದ ಬೆನ್ನಲ್ಲೇ ಅನಂತ್ ಕುಮಾರ್ ಹೆಗಡೆ ವರ್ಸಸ್ ಕಾಂಗ್ರೆಸ್ ಯುದ್ಧವೇ ಶುರುವಾಗಿದೆ. ಸಂಸದರ ಮೇಲೆ ಮುಗಿ ಬಿದ್ದ ಕಾಂಗ್ರೆಸ್ ಪಡೆ, ಸಂಸ್ಕಾರ ಹೀನ ಅನಂತ್ ಕುಮಾರ್ ಹೆಗಡೆ ಅನ್ನೋ ವಾಗ್ದಾಳಿ ಮಾಡಿದೆ. ಕಾಂಗ್ರೆಸ್ ವೈಲೆಂಟ್ ಆಗಿದ್ರೆ ಬಿಜೆಪಿ ಸೈಲೆಂಟ್ ಆಗಿದೆ. ಕೈ ಪಾಳಯದ ಪ್ರತಿಭಟನೆಗೆ ಜಗ್ಗದ ಸಂಸದ ಅನಂತ್ ಕುಮಾರ್ ಹೆಗಡೆ ಸಿದ್ದುಗೆ ಬಹಿರಂಗ ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ಕಣ್ಣಿಗೆ  ಗುರಿಯಾಗಿರುವ ಹಿಂದೂ ಫೈರ್‌ಬ್ರ್ಯಾಂಡ್ ಅನಂತಕುಮಾರ್ ಹೆಗಡೆ ಮತ್ತೆ ಸಿಡಿದ್ದೆದಿದ್ದಾರೆ. ಸಿಎಂ ವಿರುದ್ಧ  ಸಂಸ್ಕೃತಿ ಫೈಟ್ ಶುರುಮಾಡಿರೋ ಸಂಸದ ಬಹಿರಂಗವಾಗಿಯೇ ಚರ್ಚೆಗೆ ಬನ್ನಿ ಅಂತಾ ಪಂಥಹ್ವಾನ ನೀಡಿದ್ದಾರೆ. ಪ್ರಚೋದನಕಾರಿ ಭಾಷಣ ಅನ್ನೋ ವಿಚಾರಕ್ಕೆ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ  ಎಫ್ ಐ ಆರ್ ದಾಖಲಾಗಿದೆ. ಏಕವಚನ ಪ್ರಯೋಗದ ಬಗ್ಗೆ ನಡೀತಿರೋ ರಾಜಕೀಯ ರಣರಂಗದ ರೋಚಕತೆ ಹೆಚ್ಚಾಗುತ್ತಿದೆ. ಸಿಎಂ ವಿರುದ್ಧ ಏಕವಚನ ಪ್ರಯೋಗ ಸೇರಿ ಪ್ರಚೋದನಕಾರಿ ಭಾಷಣ ವಿರುದ್ಧ ಸಂಸದರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದೊಂದು ಪ್ರಕರಣದ ರಾಜಕೀಯ ರೋಚಕತೆ ಪಡೀತಾ ಇದೆ.