Asianet Suvarna News Asianet Suvarna News

ಚಿಂತನ ಮಂಥನದಲ್ಲಿ ದೂರು ನೀಡಲಿದ್ದಾರೆ 'ಕೈ' ನಾಯಕರು

ಪರಿಷತ್ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಕಚ್ಚಾಟ ಜೋರಾಗಿದೆ. ಹೈಕಮಾಂಡ್ ಎದುರೇ ನಾಯಕರು ಅಸಮಾಧಾನ ತೋಡಿಕೊಂಡಿದ್ದು, ಚಿಂತನ ಮಂಥನದಲ್ಲಿ ದೂರು ನೀಡಲಿದ್ದಾರೆ 'ಕೈ' ನಾಯಕರು ಸಿದ್ಧರಾಗಿದ್ದಾರೆ.
 

ಬೆಂಗಳೂರು (ಮೇ. 28): ಪರಿಷತ್ ಫೈಟ್ ಗೂ (MLC polls) ಮುನ್ನವೇ ಕಾಂಗ್ರೆಸ್ ನಲ್ಲಿ (Congress)  ಭಿನ್ನಾಭಿಪ್ರಾಯ ಜೋರಾಗಿದೆ. ಅದರಲ್ಲೂ ಟಿಕೆಟ್ ಸಿಕ್ಕಿಲ್ಲ ಎನ್ನುವ ಬಗ್ಗೆ ಹಲವರ ಮುನಿಸಿಗೆ ಕಾರಣವಾಗಿದೆ. ಡಿಕೆ ಶಿವಕುಮಾರ್ (DK Shivakumar) ಹಾಗೂ ಸಿದ್ಧರಾಮಯ್ಯ (siddaramaiah) ಅವರ ಬಗ್ಗೆ ಸ್ವಪಕ್ಷೀಯರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

ಅಧ್ಯಕ್ಷರದ್ದೇ ಒಂದು ಬಣವಾಗಿದ್ದರೆ, ವಿಪಕ್ಷ ನಾಯಕರದ್ದೇ ಒಂದು ಬಣವಾಗಿದೆ. ಎಸ್ ಆರ್. ಪಾಟೀಲ್ ಸೇರಿದಂತೆ ಹಲವು ನಾಯಕರಿಂದ ಕೈ ಬಣದ ಬಗ್ಗೆ ದೂರು ನೀಡಲಾಗಿದೆ. ಮುಂಬರುವ ಚಿಂತನಮಂಥನದಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಗೆ ಈ ಬಗ್ಗೆ ದೂರು ನೀಡಲು ಸಿದ್ಧತೆ ನಡೆಸುತ್ತಿದ್ದಾರೆ.

MLC Election: 'ಬಿಜೆಪಿ ಸೇರಿ ವ್ಯಕ್ತಿತ್ವ, ಮೌಲ್ಯ ಕಳೆದುಕೊಂಡ ಹೊರಟ್ಟಿ'

ಪರಿಷತ್ ಟಿಕೆಟ್ ಸಿಗದೇ ಇರುವ ಕಾರಣಕ್ಕೆ 10ಕ್ಕೂ ಅಧಿಕ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಾಯಕರು ಈಗಾಗಲೇ ಹೈ ಕಮಾಂಡ್ ಗೆ ಪತ್ರವನ್ನೂ ಬರೆದಿದ್ದಾರೆ. ರಣದೀಪ್ ಸುರ್ಜೆವಾಲಾ ಹಾಗೂ ವೇಣುಗೋಪಾಲ್ ಎದುರೇ ಬಂಡಾಯ ಪ್ರತಿಭಟನೆ ಮಾಡಲು ಪ್ಲ್ಯಾನ್ ಸಿದ್ಧವಿಟ್ಟುಕೊಂಡಿದ್ದಾರೆ. ಇದರ ನಡುವೆ ನಾಗರಾಜ್ ಯಾದವ್ ಹಾಗೂ ಜಬ್ಬಾರ್ ಗೆ ಟಿಕೆಟ್ ಕೊಟ್ಟಿರೋದಕ್ಕೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

Video Top Stories