Asianet Suvarna News Asianet Suvarna News

ರಮೇಶ್ ಜಾರಕಿಹೊಳಿ ಸುಳ್ಳು ಆರೋಪ ಮಾಡುತ್ತಿದ್ದಾರೆ: ಚೆನ್ನರಾಜ್‌ ಹಟ್ಟಿಹೊಳಿ

ಆರೋಪ ಮಾಡುವುದು ತುಂಬಾ ಸುಲಭ, ರಮೇಶ್‌ ಜಾರಕಿಹೊಳಿ ಪ್ರೆಸ್‌ ಮೀಟ್‌ನಲ್ಲಿ ಸ್ಪಷ್ಟತೆಯೇ ಇಲ್ಲ ಎಂದು ಎಂಎಲ್ಸಿ ಚೆನ್ನರಾಜ್‌ ಹಟ್ಟಿಹೊಳಿ ತಿಳಿಸಿದರು.

ಇನ್ನೊಬ್ಬರ ಮೇಲೆ ಕೈ ಮಾಡಿ ತೋರಿಸುವುದು ಸುಲಭ. ಆರೋಪ ಮಾಡುವುದನ್ನು ಬಿಟ್ಟು ಸುಳ್ಳು ಹೇಳುವುದನ್ನು ಬಿಟ್ಟು ದಾಖಲೆ ಸಮೇತ ಜನರ ಮುಂದೆ ಬಂದರೆ ಆ ದಾಖಲೆಗೆ ಉತ್ತರವನ್ನು ಕೊಡುತ್ತೇವೆ ಎಂದು ಚೆನ್ನರಾಜ್‌ ಹಟ್ಟಿಹೊಳಿ ಹೇಳಿದರು. ರಮೇಶ್ ಜಾರಕಿಹೊಳಿ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದು, ಕಾಂಗ್ರೆಸ್‌ ಪಕ್ಷದ ನಾಯಕರ ವಿರುದ್ಧ ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ ಎಂದರು. ಏನಾದ್ರೂ ಸಾಕ್ಷಿ ಪುರಾವೆ ಇದ್ದರೆ ಸಿಡಿ ಬಿಡುಗಡೆ ಮಾಡಲಿ, ಹೆಣ್ಮಕ್ಕಳ ಬಗ್ಗೆ ಜಾರಕಿಹೊಳಿ ಮನಸ್ಥಿತಿ ತಿಳಿಯುತ್ತದೆ. ಅವರು ಸುಳ್ಳು ಮಾತಾಡುವುದನ್ನು ಕಲಿತಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳಕರ್‌ ಸಹೋದರ ಎಂಎಲ್ಸಿ ಚೆನ್ನರಾಜ್‌ ಹಟ್ಟಿಹೊಳಿ  ಹೇಳಿದ್ದಾರೆ.

ನನ್ನನ್ನು ಸಮಯ ಕಾದು ಡಿಕೆಶಿ ಹೊಡೆದಿದ್ದಾರೆ: ರಮೇಶ್ ಜಾರಕಿಹೊಳಿ ಕಿಡಿ

Video Top Stories