ನನ್ನ ನಡೆಗೆ ವಿಷಾದ ವ್ಯಕ್ತಪಡಿಸಲ್ಲ, ಸದನದಲ್ಲಿ ಶರ್ಟ್ ಬಿಚ್ಚಿರುವುದನ್ನು ಸಮರ್ಥಿಸಿಕೊಂಡ ಸಂಗಮೇಶ್

ಸಭ್ಯತೆ ಮರೆತು, ಸದನದಲ್ಲಿ ಶರ್ಟ್ ಬಿಚ್ಚಿರುವುದನ್ನು ಶಾಸಕ ಸಂಗಮೇಶ್ ಸಮರ್ಥಿಸಿಕೊಂಡಿದ್ದಾರೆ. ನನ್ನ ನಡೆಗೆ ವಿಷಾದ ವ್ಯಕ್ತಪಡಿಸಲ್ಲ ಎಂದಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 04): ಸಭ್ಯತೆ ಮರೆತು, ಸದನದಲ್ಲಿ ಶರ್ಟ್ ಬಿಚ್ಚಿರುವುದನ್ನು ಶಾಸಕ ಸಂಗಮೇಶ್ ಸಮರ್ಥಿಸಿಕೊಂಡಿದ್ದಾರೆ. ' ಶಾಸಕನಾದ ನನ್ನನ್ನ ಹತ್ತಿಕ್ಕುವ ಪ್ರಯತ್ನ ನಡೆದಿದೆ. ರಕ್ಷಣೆ ನೀಡುವಂತೆ ಕೋರಿ ಸ್ಪೀಕರ್‌ಗೆ ನಿನ್ನೆಯೇ ಪತ್ರ ಬರೆದಿದ್ದೆ. ಸದನದಲ್ಲಿ ಚರ್ಚೆಗೆ ಅವಕಾಶ ಕೋರಿದ್ದೆ. ಸ್ಪೋಕರ್ ಅವಕಾಶ ಕೊಡಲಿಲ್ಲ. ಹೀಗಾಗಿ ಶರ್ಟ್ ಬಿಚ್ಚಿ ಆಕ್ರೋಶ ಹೊರ ಹಾಕಿದೆ' ಎಂದು ಸಂಗಮೇಶ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. 

ಸದನದಲ್ಲಿ ಶರ್ಟ್ ಬಿಚ್ಚಿದ ಶಾಸಕ ಸಂಗಮೇಶ್, ಸ್ಪೀಕರ್ ಗರಂ

Related Video