News Hour: ಆರ್.ಅಶೋಕ್‌ಗೆ ವಿಪಕ್ಷ ನಾಯಕನ ಪಟ್ಟ, ಬಿಜೆಪಿಯಲ್ಲಿ ಬಂಡಾಯ ಸ್ಫೋಟ!
ಬಿಜೆಪಿ ವಿಪಕ್ಷ ನಾಯಕನಾಗಿ ಪದ್ಮನಾಭನಗರದ ಪ್ರಬಲ ಒಕ್ಕಲಿಗ ನಾಯಕ ಆರ್.ಅಶೋಕ್ ಅವರನ್ನು ಆಯ್ಕೆ ಮಾಡಿದೆ. ಅಶೋಕ್ ಆಯ್ಕೆ ಮೂಲಕ ಯಡಿಯೂರಪ್ಪ ಬಣ ಮತ್ತೊಮ್ಮೆ ಮೇಲುಗೈ ಸಾಧಿಸಿದೆ. ಅಶೋಕ್ ಅವರ ಹೆಸರನ್ನು ಬಿಎಸ್ ಯಡಿಯೂರಪ್ಪ ಅವರು ಘೋಷಿಸಿದರು.
ಬೆಂಗಳೂರು (ನ.17): ಆರ್.ಅಶೋಕ್ ವಿಪಕ್ಷ ನಾಯಕರಾಗಿ ಆಯ್ಕೆಯಾಗುವ ಸೂಚನೆ ಸಿಕ್ಕಂತೆಯೇ ಬಿಜೆಪಿಯಲ್ಲಿ ಬಂಡಾಯ ಸ್ಪೋಟವಾಗಿದೆ. ಎಸ್‌ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಗೈರಾಗಿದ್ದರೆ, ಬಸವನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಬಂದಷ್ಟೇ ವೇಗವಾಗಿ ಹೊರನಡೆದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟವನ್ನು ಲಿಂಗಾಯತರಿಗೆ ನೀಡಿದ್ದ ಕಾರಣದಿಂದ ವಿಪಕ್ಷ ಸ್ಥಾನ ಒಕ್ಕಲಿಗಲಿರಿಗೆ ಸಿಗುವುದು ಖಚಿತವಾಗಿತ್ತು. ಕೊನೆಗೆ ಅಶ್ವತ್ಥ್ ನಾರಾಯಣ್ ಹಾಗೂ ಅರಗ ಜ್ಞಾನೇಂದ್ರ ಅವರನ್ನು ಹಿಂದೆ ಹಾಕಿ ಅಶೋಕ್, ವಿಪಕ್ಷ ನಾಯಕರಾಗಿದ್ದಾರೆ. ಗೃಹಸಚಿವ, ಉಪಮುಖ್ಯಮಂತ್ರಿ ಸ್ಥಾನವನ್ನು ಅಶೋಕ್ ನಿಭಾಯಿಸಿದ್ದಾರೆ.
ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತ ಬಿಜೆಪಿ ಅಭ್ಯರ್ಥಿ ಈಗ ವಿಪಕ್ಷ ನಾಯಕ: ಅಶೋಕ್ ಬಗ್ಗೆ ಕಾಂಗ್ರೆಸ್ ಲೇವಡಿ
ರಾಜ್ಯಾಧ್ಯಕ್ಷ ಸ್ಥಾನ ದಕ್ಷಿಣ ಕರ್ನಾಟಕದವರಿಗೆ ಹೋಗಿರುವ ಕಾರಣ, ವಿಪಕ್ಷ ನಾಯಕ ಸ್ಥಾನ ಉತ್ತರ ಕರ್ನಾಟಕದವರಿಗೆ ಸಿಗುವ ನಿರೀಕ್ಷೆ ಇತ್ತು. ಆದರೆ, ಬೇರೆ ಲೆಕ್ಕಾಚಾರದಲ್ಲಿ ಅಶೋಕ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಶಾಸಕ ಅರವಿಂದ್ ಬೆಲ್ಲದ್ ಪ್ರತಿಕ್ರಿಯಿಸಿದ್ದಾರೆ. ಇನ್ನು ವಿಪಕ್ಷ ನಾಯಕನ ರೇಸ್‌ನಲ್ಲಿದ್ದ ಅಶ್ವತ್ ನಾರಾಯಣ್ ಕೂಡ ಪಕ್ಷದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.