'ಸಿದ್ದರಾಮಯ್ಯ ಧಮ್‌, ಆಡಳಿತ ಎರಡನ್ನೂ ನೋಡಿದ್ದೇನೆ'

ಅಧಿವೇಶನಲ್ಲಿ ಹೇಗೆ ಮಾತನಾಡುತ್ತಾರೆ, ಹೊರಗಡೆ ಹೇಗೆಲ್ಲ ಹೇಳಿಕೆಗಳನ್ನ ನೀಡುತ್ತಾರೆ ಎಂಬುದನ್ನು ಗಮನಿಸಿದ್ದೇನೆ. ಸಿದ್ದರಾಮಯ್ಯ ಆಟ ಏನು ನಡೆಯೋದಿಲ್ಲ ಎಂದ ಸಚಿವ ಎಸ್‌.ಟಿ. ಸೋಮಶೇಖರ್‌ 

Share this Video
  • FB
  • Linkdin
  • Whatsapp

ಬೆಂಗಳೂರು(ಅ.27): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧಮ್‌ ಹಾಗೂ ಆಡಳಿತವನ್ನ ಹತ್ತಿರದಿಂದ ಐದು ವರ್ಷದಿಂದ ನೋಡಿದ್ದೇನೆ, ಯಾವ ತರಹದ ಆಡಳಿತ ಇದೆ ಅನ್ನೋದನ್ನ ನೋಡಿದ್ದೇನೆ, ಯಾವ ತರಹದ ಧಮ್‌ ಇದೆ ಎಂದು ಗಮನಿಸಿದ್ದೇನೆ, ಅಧಿವೇಶನಲ್ಲಿ ಹೇಗೆ ಮಾತನಾಡುತ್ತಾರೆ, ಹೊರಗಡೆ ಹೇಗೆಲ್ಲ ಹೇಳಿಕೆಗಳನ್ನ ನೀಡುತ್ತಾರೆ ಎಂಬುದನ್ನು ಗಮನಿಸಿದ್ದೇನೆ. ಅವರ ಆಟ ಏನು ನಡೆಯೋದಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯಗೆ ಸಚಿವ ಎಸ್‌.ಟಿ. ಸೋಮಶೇಖರ್‌ ಟಾಂಗ್‌ ಕೊಟ್ಟಿದ್ದಾರೆ. 

ರಾಜ್ಯದಲ್ಲಿ ಕೋವಿಡ್ ಸೋಂಕು ದಾಖಲೆ ಪ್ರಮಾಣದಲ್ಲಿ ಇಳಿಕೆ

ಸುಮ್ನೆ ಚುನಾವಣೆಯನ್ನ ಗಿಮಿಕ್ ಮಾಡುತ್ತಿದ್ದಾರೆ ವಿನಃ ಇದರಲ್ಲೇನಿದೆ ಧಮ್‌ ಎಂದು ಸಚಿವ ಸೋಮಶೇಖರ್‌ ಪ್ರಶ್ನಿಸಿದ್ದಾರೆ. ಅಧಿವೇಶನ ಅಮೂಲ್ಯವಾದ ಸಮಯದಲ್ಲಿ ಮಾತನಾಡುವುದಿಲ್ಲ, ಆದರೆ, ಚುನಾವಣೆಯಂತಹ ಸಂದರ್ಭದಲ್ಲಿ ಇಲ್ಲಸಲ್ಲದ ಹೇಳಿಕೆಗಳನ್ನ ನೀಡುತ್ತಾರೆ ಎಂದು ಕಿಡಿಕಾರಿದ್ದಾರೆ. 

Related Video