ಅನಂತ್ ಕುಮಾರ್ ಹೆಗಡೆ ಯಾವ ಪುಟಗೋಸಿ? ಸಿಎಂ ಕಾಲಿನ ಧೂಳಿಗೂ ಸಮನಲ್ಲ: ಸಚಿವ ತಂಗಡಗಿ ಆಕ್ರೋಶ

ಸಿಎಂ ಸಿದ್ದರಾಮಯ್ಯ ಮುಂದೆ ಸಂಸದ ಅನಂತ್ ಕುಮಾರ್‌ ಹೆಗಡೆ ಪುಟಗೋಸಿಗೆ ಸಮನಲ್ಲ. ಸಿದ್ದರಾಮಯ್ಯ, ಕಾಂಗ್ರೆಸ್ ಬಗ್ಗೆ ಮಾತನಾಡುವ ನಿಮ್ಮಂಥ ನಾಯಿಗಳಿಗೆ ನಾನು ಅಲ್ಲಿಗೆ ಬಂದು ಉತ್ತರ ಕೊಡಬೇಕಾಗುತ್ತೆ ಮಗನೆ ಎಂದು ಸಚಿವ ಶಿವರಾಜ್‌ ತಂಗಡಗಿ ಏಕವಚನದಲ್ಲಿಯೇ ತಿರುಗೇಟು ನೀಡಿದ್ದಾರೆ. 

First Published Jan 14, 2024, 8:21 PM IST | Last Updated Jan 14, 2024, 8:21 PM IST

ಕೊಪ್ಪಳ (ಜ.14): ಸಿಎಂ ಸಿದ್ದರಾಮಯ್ಯ ಮುಂದೆ ಸಂಸದ ಅನಂತ್ ಕುಮಾರ್‌ ಹೆಗಡೆ ಪುಟಗೋಸಿಗೆ ಸಮನಲ್ಲ. ಸಿದ್ದರಾಮಯ್ಯ, ಕಾಂಗ್ರೆಸ್ ಬಗ್ಗೆ ಮಾತನಾಡುವ ನಿಮ್ಮಂಥ ನಾಯಿಗಳಿಗೆ ನಾನು ಅಲ್ಲಿಗೆ ಬಂದು ಉತ್ತರ ಕೊಡಬೇಕಾಗುತ್ತೆ ಮಗನೆ ಎಂದು ಸಚಿವ ಶಿವರಾಜ್‌ ತಂಗಡಗಿ ಏಕವಚನದಲ್ಲಿಯೇ ತಿರುಗೇಟು ನೀಡಿದ್ದಾರೆ. ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ಸಂಸದ ಅನಂತ್‌ ಕುಮಾರ್‌ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿ, ಅನಂತ್‌ ಕುಮಾರ್‌ಗೆ ಅವನದೇ ಭಾಷೆಯಲ್ಲಿ ಉತ್ತರ ಕೊಡಲು ನನಗೂ ಬರುತ್ತೆ.‌ ಆದರೆ ನನ್ನ ಹಿರಿಯರು ನನಗೆ ಸಂಸ್ಕಾರ ಕಲಿಸಿದ್ದಾರೆ.

ಅದಕ್ಕಾಗಿ ಅವನಿಗೆ ಕೆಟ್ಟ ಭಾಷೆಯಲ್ಲಿ ಉತ್ತರ ಕೊಡುತ್ತಿಲ್ಲ. ಬದಲಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದೇ ಮೊದಲು ಮತ್ತು ಕೊನೆ. ಸಿದ್ದರಾಮಯ್ಯ ಬಗ್ಗೆ ಅವನು ಮಾತನಾಡಬಾರದು. ಸಿದ್ದರಾಮಯ್ಯ ಅವರಿಗೆ ಆಗಿರುವ ಅನುಭವ‌ದಷ್ಟು ಅವನಿಗೆ ವಯಸ್ಸಾಗಿಲ್ಲ. ಅವರ ಕಾಲಿನ ಧೂಳಿಗೂ ಹೆಗಡೆ ಸಮನಲ್ಲ. ನಾನೂ ಕೂಡ ಹೀಗೆ ಮಾತನಾಡಬಾರದು. ಆದರೆ ಅವನಾಡಿದ ಮಾತಿನಿಂದ ನೋವಾಗಿ ಹೀಗೆ ಹೇಳಿದ್ದೇನೆ. ಇಂಥ ನಾಯಿಗಳಿಗೆ ನಾವು ಬುದ್ಧಿ ಕಲಿಸುತ್ತೇವೆ. ಹೀಗೆ ಮಾತು ಮುಂದುವರೆಸಿದರೆ, ನಾನು ಮುಂದೆ ಉತ್ತರ ಕರ್ನಾಟಕದ ಭಾಷೆಯಲ್ಲಿ ಉತ್ತರ ಕೊಡ ಬೇಕಾಗುತ್ತೆ. ಇವನಿಗಿಂತ ಕೆಟ್ಟ ಭಾಷೆಯಲ್ಲಿ ಉತ್ತರ ಕೊಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.