ಮಸ್ಕಿ ಬೈಎಲೆಕ್ಷನ್ ಅಖಾಡ, ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಪೈಪೋಟಿ, ಯಾರ ಪರ ಇದೆ ಅಲೆ.?
ಬಹುಕುತೂಹಲ ಕೆರಳಿಸಿರುವ ಮಸ್ಕಿ ಉಪಚುನಾವಣೆಯ ಅಂತಿಮ ಕಣದಲ್ಲಿ 8 ಜನ ಅಭ್ಯರ್ಥಿಗಳು ಉಳಿದಿದ್ದು, ಬಿಜೆಪಿಯ ಪ್ರತಾಪಗೌಡ ಪಾಟೀಲ್, ಕಾಂಗ್ರೆಸ್ ಆರ್.ಬಸನಗೌಡ ತುರ್ವಿಹಾಳ ನಡುವೆ ನೇರ ಪೈಪೋಟಿಯು ಬಹುತೇಕ ಖಚಿತಗೊಂಡಿದೆ.
ಬೆಂಗಳೂರು (ಏ. 14): ಬಹುಕುತೂಹಲ ಕೆರಳಿಸಿರುವ ಮಸ್ಕಿ ಉಪಚುನಾವಣೆಯ ಅಂತಿಮ ಕಣದಲ್ಲಿ 8 ಜನ ಅಭ್ಯರ್ಥಿಗಳು ಉಳಿದಿದ್ದು, ಬಿಜೆಪಿಯ ಪ್ರತಾಪಗೌಡ ಪಾಟೀಲ್, ಕಾಂಗ್ರೆಸ್ ಆರ್.ಬಸನಗೌಡ ತುರ್ವಿಹಾಳ ನಡುವೆ ನೇರ ಪೈಪೋಟಿಯು ಬಹುತೇಕ ಖಚಿತಗೊಂಡಿದೆ.
ರಂಗೇರಿದ ಮಸ್ಕಿ ಉಪಚುನಾವಣೆ ಕಾವು: ಇಲ್ಲಿದೆ ಗ್ರೌಂಡ್ ರಿಪೋರ್ಟ್!
ಈ ಬೈ ಎಲೆಕ್ಷನ್‌ನಲ್ಲಿ ಒಟ್ಟು 10 ಜನ ಅಭ್ಯರ್ಥಿಗಳು 13 ನಾಮತ್ರಗಳನ್ನು ಸಲ್ಲಿಸಿದ್ದರು. ಅದರಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ಟಿ.ಚಕ್ರವರ್ತಿ ನಾಯಕ, ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಸಿದ್ದಲಿಂಗಪ್ಪ ಅವರು ನಾಮಪತ್ರ ಹಿಂದಕ್ಕೆ ಪಡೆದಿ ಕಾರಣಕ್ಕೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ, ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿ ಓಬಳೇಶಪ್ಪ ಬಿ.ಟಿ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ದೀಪಿಕಾ ಎಸ್, ಶ್ರೀನಿವಾಸ ನಾಯಕ, ಅಮರೇಶ, ಈಶಪ್ಪ, ಬಸನಗೌಡ ಸೇರಿದಂತೆ ಒಟ್ಟು 8 ಜನ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ಇವರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಅಣಾಹಣಿಯು ಸೃಷ್ಠಿಯಾಗಿದೆ. ಅಲ್ಲಿಯ ಜನರ ನಾಡಿ ಮಿಡಿತ ಹೇಗಿದೆ..? ಜನ ಏನಂತಾರೆ..?