ಮರಾಠರ ಹೋರಾಟಕ್ಕೆ ಬೆಂಬಲ ನೀಡಿದ ಸತೀಶ್ ಜಾರಕಿಹೊಳಿಗೆ ಮುಖಭಂಗ!

ಬೆಳಗಾವಿ ಸದನದಲ್ಲಿ ಮೀಸಲಾತಿ ಹೋರಾಟ, ಮುಖಭಂಗದಿಂದ ಜಾರಿಕೊಳ್ಳಲು ಬಿಜೆಪಿ ಮೇಲೆ ಗೂಬೆ ಕೂರಿಸಿದ ಜಾರಕಿಹೊಳಿ, ಉಮೇಶ್ ಕೊಲ್ಹೆ ಹತ್ಯೆ ಆರೋಪಿಗಳಿಗೆ ತಬ್ಲೀಘಿ ಜಮಾತ್ ಲಿಂಕ್ ಸೇರಿದಂತೆ ಇಂದಿನ ಇಡೀ ದಿನದ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಮರಾಠ ಸಮುದಾಯ ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡಲು ಬಂದ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿಗೆ ಮುಖಭಂಗವಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗೆ ಬಂದ ಜಾರಕಿಹೊಳಿ ವಿರುದ್ಧ ಮರಾಠ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಹಿಂದೂ ಅಶ್ಲೀಲ ಪದ ಹಾಗೂ ಸಂಭಾಜಿ ಮಹರಾಜರ ಕುರಿತು ಈ ಹಿಂದೆ ನೀಡಿದ್ದ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಮರಾಠ ಸಮುದಾಯ ಹೋರಾಟ ನಡೆಸಿತು ಈ ಮುಖಭಂಗ ತಪ್ಪಿಸಲು ಇದೀಗ ಬಿಜೆಪಿ ಮೇಲೆ ಗೂಬೆ ಹೊರಿಸಲು ಹೋಗಿ ಮತ್ತೆ ಪೇಚಿಗೆ ಸಿಲುಕಿದ್ದಾರೆ. ಇದು ಬಿಜೆಪಿ ಮಾಡಿದ ಕೃತ್ಯ, ಲೀಡರ್ ಆಗಬೇಕಾದರೆ ಜಿಂದಾಬಾದ್ ಇರಬೇಕು, ಮುರ್ದಾಬಾದ್ ಇರಬೇಕು ಎಂದಿದ್ದಾರೆ.

Related Video