ಉಗ್ರರ ಪರ ನಿಂತ್ರಾ ಡಿಕೆ ಶಿವಕುಮಾರ್? ಮಂಗಳೂರು ಬ್ಲಾಸ್ಟ್‌ಗೆ ರಾಜಕೀಯ ಟ್ವಿಸ್ಟ್!
ಉಗ್ರ ಶಾರೀಖ್‌ಗೆ ಅಮಾಯಕ ಸರ್ಟಿಫಿಕೇಟ್ ನೀಡಿದ್ರಾ ಡಿಕೆಶಿ? ಉಗ್ರರನನ್ನು ಉಗ್ರ ಎನ್ನದೇ ಬ್ರದರ್ಸ್ ಎನ್ನಬೇಕೆ? ಬಿಜೆಪಿ ತಿರುಗೇಟು, ಚುನಾವಣೆ ಹೊತ್ತಲ್ಲಿ ಉಗ್ರರ ಪರ ಕಾಂಗ್ರೆಸ್ ಒಲವು ಸೇರಿದಂತೆ ಇಂದಿನ ಇಡೀ ದಿನದ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಒಲೈಕೆ ರಾಜಕಾರಣ ಶುರುಮಾಡಿದ್ದಾರೆ. ಮಂಗಳೂರು ಸ್ಫೋಟದಲ್ಲಿ ಸೆರೆಯಾಗಿರುವ ಉಗ್ರ ಶಾರೀಖ್ ಪರ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಪೊಲೀಸ್ ಡಿಜಿ ಮಂಗಳೂರು ಪ್ರಕರಣವನ್ನು ಉಗ್ರ ಕೃತ್ಯ ಎಂದು ಹೇಗೆ ಹೇಳಿದ್ದಾರೆ. ಶಾರೀಖ್‌ನನ್ನು ಉಗ್ರ ಹಣೆ ಪಟ್ಟಿ ಕಟ್ಟಿದ್ದು ಹೇಗೆ? ಎಂದು ಪ್ರಶ್ನಿಸಿದ್ದಾರೆ. ಮಂಗಳೂರು ಸ್ಪೋಟದ ತನಿಖೆ ನಡೆಸದೇ ಉಗ್ರರ ಕೃತ್ಯ ಎಂದು ಕರೆದಿದ್ದೇಕೆ? ಈ ವರೆಗೆ ಏನೂ ಕ್ರಮ ಕೈಗೊಂಡಿದ್ದೀರೀ? ಟೆರರಿಸ್ಟ್ ಎಂದು ಘೋಷಿಸಲು ಪೊಲೀಸ್ ಡಿಜಿಗೆ ಅಧಿಕಾರ ಕೊಟ್ಟವರು ಯಾರು? ಎಂದು ಡಿಕೆ ಶಿವಕುಮಾರ್ ಪ್ರಶ್ನೆಗೆ ಆಕ್ರೋಶ ಹೆಚ್ಚಾಗಿದೆ. ಮಂಗಳೂರು ಸ್ಪೋಟ ಪ್ರಕರಣದ ಕುರಿತು ಹೇಳಿಕೆ ನೀಡಿದ ಡಿಕೆ ಶಿವಕುಮಾರ್‌ಗೆ ಬಿಜೆಪಿ ತಿರುಗೇಟು ನೀಡಿದೆ. ಭಯೋತ್ಪಾದಕ ಕೃತ್ಯ ಎಸಗಿದ ಉಗ್ರರನ್ನು ಉಗ್ರ ಎನ್ನದೇ ಬ್ರದರ್ಸ್ ಎನ್ನಬೇಕೆ ಎಂದು ಬಿಜೆಪಿ ಪ್ರಶ್ನಿಸಿದೆ.