ಮೋದಿ ಮೈತ್ರಿ ಮುರಿದ ಉದ್ದವ್ ಠಾಕ್ರೆಗೆ ಇದೆಂಥಾ ದುಸ್ಥಿತಿ?

ಇಂದು ರಾಜಕೀಯ ಅಖಾಡದಲ್ಲಿ ಮೋದಿಗಿಂತ ದೊಡ್ಡ ನಾಯಕರಿಲ್ಲ. ಮೋದಿಯನ್ನು ಮಣಿಸುವ ನಿಟ್ಟಿನಲ್ಲಿ ಮಾಡಿದ ಪ್ರಯತ್ನಗಳಿಗೆ ಆಯಾ ನಾಯಕರೇ ಸೋಲು ಕಂಡಿದ್ದಾರೆ. ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು, ಬಾದಲ್ ಅವರ ಸಾಲಿಗೆ ಈಗ ಉದ್ಧವ್‌ ಠಾಕ್ರೆ ಕೂಡ ಸೇರಿಕೊಂಡಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಜೂನ್ 24): ಮೋದಿಗೆ ಕೈಕೊಟ್ಟವರೆಲ್ಲಾ ರಾಜಕೀಯ (Politics) ಅಖಾಡದಲ್ಲಿ ಚಿಂದಿ ಚಿಂದಿ... ರಣರಂಗದಲ್ಲಿ ತೊಡೆ ತಟ್ಟಿ ಸವಾಲ್ ಹಾಕಿದವರ ಗರ್ವಭಂಗ. ಮೋದಿ ವಿರುದ್ಧದ ಮೈತ್ರಿವ್ಯೂಹಕ್ಕಿಲ್ವಾ ದೀರ್ಘಾಯುಷ್ಯ..? ಮೋದಿ (Narendra Modi) ದೋಸ್ತಿ ಬಿಟ್ಟು ವಿರೋಧಿಗಳ ಜೊತೆ ಕೈಜೋಡಿಸಿದ್ದ ಠಾಕ್ರೆಗೆ (Uddhav Thackeray) ಥೌಸಂಡ್ ವೋಲ್ಟ್ ಕರೆಂಟ್ ಶಾಕ್!

ಪೂರ್ವದಲ್ಲಿ ನಿತೀಶ್ ಕುಮಾರ್, ಪಶ್ಚಿಮದಲ್ಲಿ ಉದ್ಧವ್ ಠಾಕ್ರೆ, ದಕ್ಷಿಣದಲ್ಲಿ ಚಂದ್ರಬಾಬು ನಾಯ್ಡು. ಉತ್ತರದಲ್ಲೂ ಮೋದಿಗೆ ಕೈಕೊಟ್ಟು ಕೈಸುಟ್ಟುಕೊಂಡವರಿದ್ದಾರೆ. ಅವರು ಯಾರು..? ಮೋದಿ ಮೈತ್ರಿ ಕಡಿದುಕೊಂಡ ಪರಿಣಾಮ ರಾಜಕೀಯವಾಗಿ ಅವರಿಗೆ ಬಿದ್ದ ಪೆಟ್ಟು ಅರಗಿಸಿಕೊಳ್ಳಲು ಸಾಧ್ಯವಾಗದೇ ಇರುವಂಥದ್ದು.

ತಂದೆ ಕಟ್ಟಿದ್ದ ಶಿವಸೈನ್ಯವೇ ಮಗನಿಗೆ ಮುಳುವಾಗಿದ್ದು ಏಕೆ?

ಪ್ರಧಾನಿ ಮೋದಿಗೆ ಕೈಕೊಟ್ಟು ರಾಜಕೀಯವಾಗಿ ಹಿನ್ನಡೆ ಅನುಭವಿಸಿದವರು ಒಬ್ಬಿಬ್ಬರಲ್ಲ. ಪೂರ್ವ-ಪಶ್ಚಿಮ-ಉತ್ತರ-ದಕ್ಷಿಣ.. ಹೀಗೆ ದೇಶದ ನಾಲ್ಕೂ ದಿಕ್ಕುಗಳಲ್ಲಿ ಮೋದಿಗೆ ಡಿಚ್ಚಿ ಕೊಟ್ಟವರು ಅಪ್ಪಚ್ಚಿಯಾಗಿದ್ದಾರೆ. ಮೋದಿ ಜೊತೆಗಿನ ಮೈತ್ರಿಗೆ ಎಳ್ಳುನೀರು ಬಿಟ್ಟು ಹೇಳ ಹೆಸರಿಲ್ಲದಂತಾದ ಮತ್ತೊಬ್ಬ ನಾಯಕನ ಉದ್ಧವ್ ಠಾಕ್ರೆ.

Related Video