Video- ಲೋಕಾಯುಕ್ತ ಪೊಲೀಸರು ಅಯೋಗ್ಯರು, ಅನರ್ಹರು, ನಾಲಾಯಕ್ಕು! ರವಿಕೃಷ್ಣ ರೆಡ್ಡಿ ಆಕ್ರೋಶ

ಲೋಕಾಯುಕ್ತ ಪೊಲೀಸರು ಅಯೋಗ್ಯರು, ಅನರ್ಹರು ಹಾಗೂ ನಾಲಾಯಕ್ಕು ಎಂದು ಕೆಆರ್‌ಎಸ್‌ ಪಕ್ಷದ ಸಂಸ್ಥಾಪಕ ಆಧ್ಯಕ್ಷ ರವಿಕೃಷ್ಣರೆಡ್ಡಿ ಕಿಡಿಕಾರಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.07): ಸುಮಾರು 6 ಕೋಟಿ ರೂ. ಅಕ್ರಮ ಹಣದ ಆರೋಪಿ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರು ಜಾಮೀನು ಪಡೆದುಕೊಂಡು ಅದ್ಧೂರಿ ಮೆರವಣಿಗೆ ಮಾಡಿಸಿಕೊಂಡಿದ್ದಾನೆ. ಈ ಕುರಿತು ಕೆಆರ್‌ಎಸ್‌ ಪಕ್ಷದ ಸಂಸ್ಥಾಪಕ ಆಧ್ಯಕ್ಷ ರವಿಕೃಷ್ಣರೆಡ್ಡಿ ಮಾತನಾಡಿ, ಲೋಕಾಯುಕ್ತ ಪೊಲೀಸರು ಅಯೋಗ್ಯರು, ಅನರ್ಹರು ಹಾಗೂ ನಾಲಾಯಕ್ಕು ಎಂದು ಕಿಡಿಕಾರಿದ್ದಾರೆ. ಲೋಕಾಯುಕ್ತಕ್ಕೆ ದೂರು ಕೊಡುವವರು ವೀಡಿಯೋ ಮತ್ತು ಆಡಿಯೋ ಸಾಕ್ಷಾಧಾರಗಳ ಮೂಲಕ ದೂರು ನೀಡಲು ಹೋಗುತ್ತಾರೆ. ಆಗ ಸಂಪೂರ್ಣವಾಗಿ ಎಫ್‌ಐಆರ್‌ ದಾಖಲಿಸಿಕೊಳ್ಳುತ್ತಾರೆ. ಇಲ್ಲವೆಂದರೆ ಯಾವುದಾದರೂ ನ್ಯೂಸ್‌ ಚಾನೆಲ್‌ಗೆ ಅದನ್ನು ಕೊಟ್ಟಾಗ ಲೋಕಾಯುಕ್ತದ ಮೇಲೆ ದೊಡ್ಡ ಆರೋಪ ಕೇಳಿಬರುತ್ತದೆ.

ಲೋಕಾಯುಕ್ತರು ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರ ಪುತ್ರನ ಕಚೇರಿ ಮೇಲೆ ದಾಳಿ, ಅವರ ಮನೆಯ ಮೇಲೆ ದಾಳಿ ಹಾಗೂ ಇತರೆಡೆ ದಾಳಿ ಸುಮಾರು 6 ಕೋಟಿ ರೂ. ಅಕ್ರಮ ಹಣ ಇಟ್ಟುಕೊಂಡಿರುವುದು ಕಂಡುಬಂದಿತ್ತು. ಆದರೆ, ನ್ಯಾಯಾಲಯದಲ್ಲಿ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರ ಪರವಾಗಿ ಹಿರಿಯ ವಕೀಲ ವಾದವನ್ನು ಮಾಡಿದ್ದಾರೆ. ಮತ್ತೊಂದೆಡೆ ಲೋಕಾಯುಕ್ತ ಇಲಾಖೆ ಪರವಾಗಿ ಕಿರಿಯ ಸರ್ಕಾರಿ ವಕೀಲ ವಾದ ಮಾಡಿದ್ದಾರೆ ಎಂದು ಕೇಳಿಬಂದಿದೆ. ಪರಮ ಪವಿತ್ರವಾದ ರಾಜಕಾರಣಕ್ಕೆ ಹಲ್ಕಾಗಳು ಬಂದಿದ್ದಾರೆ. ಇದನ್ನು ಕ್ಲಿಯರ್‌ ಮಾಡುವುದು ಅಗತ್ಯವಾಗಿದೆ.

Related Video