ವಿಜಯೇಂದ್ರ ಭೇಟಿ ಬಳಿಕ ಮುಗಿಯದ ಕುತೂಹಲ, ನಾಳೆ ಘೋಷಣೆಯಾಗಲಿದೆ ಸುಮಲತಾ ನಿರ್ಧಾರ!

ಮಂಡ್ಯದಲ್ಲಿ ಸುಮಲತಾ ಬೆಂಬಲ ಯಾರಿಗೆ?  ಅಖಾಡಕ್ಕಿಳಿದ ದೇವೇಗೌಡರು, ಬಿಜೆಪಿ-ಜೆಡಿಎಸ್‌ನಲ್ಲಿ ಹೊಸ ಹುರುಪು, ಕೋಲಾರದಲ್ಲಿ ಕೆವಿ ಗೌತಮ್‌ಗೆ ಟಿಕೆಟ್ ನೀಡಲು ಮುಂದಾಯ್ತಾ ಕಾಂಗ್ರೆಸ್? ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

Share this Video
  • FB
  • Linkdin
  • Whatsapp

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿರುವ ಪಕ್ಷೇತ್ರರ ಸಂಸದೆ ಸುಮಲತಾಗೆ ಈ ಬಾರಿ ಮಂಡ್ಯ ಕ್ಷೇತ್ರ ಕೈತಪ್ಪಿದೆ. ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಹಂಚಿಕೆ ಮಾಡಿದ ಬಳಿಕ ಸುಮಲತಾ ನಡೆ ಕುತೂಹಲ ಕೆರಳಿಸಿದೆ. ಅಂತರ ಕಾಯ್ದುಕೊಂಡಿರುವ ಸುಮಲತಾರನ್ನು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಹತ್ವದ ಮಾತುಕತೆ ನಡೆಸಿದ್ದಾರೆ. ಸುದೀರ್ಘ ಚರ್ಚೆ ಬಳಿಕ ಮಂಡ್ಯ ಸುಮಲತಾ ನಿರ್ಧಾರ ಕುತೂಹಲಕ್ಕೆ ತೆರೆ ಬಿದ್ದಿಲ್ಲ. ನಾಳೆ ಸುಮಲತಾ ಬೆಂಬಲಿಗರ ಸಭೆ ನಡೆಸಿ ನಿರ್ಧಾರ ಘೋಷಿಸಲಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video