ನಿರಾಣಿಗೆ ಮಂತ್ರಿಗಿರಿ ಕೊಡಿಸಿದ್ದೇ ಇವರು, ಕೇಸರಿ ಕೋಟೆಯೊಳಗೆ ರೋಚಕ ಆಪರೇಶನ್..!

ಈ ಬಾರಿ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನಕ್ಕಾಗಿ ಸಾಕಷ್ಟು ಸರ್ಕಸ್ ನಡೆದಿದೆ. ಯಾರೂ ನಿರೀಕ್ಷಿಸದವರಿಗೆ ಸಚಿವ ಸ್ಥಾನ ಸಿಕ್ಕಿರುವುದು ಅಚ್ಚರಿ ವಿಚಾರ. ಆ ಪೈಕಿ ಮುರುಗೇಶ್ ನಿರಾಣಿ ಕೂಡಾ ಒಬ್ಬರು. 

Suvarna News  | Updated: Jan 20, 2021, 6:27 PM IST

ಬೆಂಗಳೂರು (ಜ. 20): ಈ ಬಾರಿ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನಕ್ಕಾಗಿ ಸಾಕಷ್ಟು ಸರ್ಕಸ್ ನಡೆದಿದೆ. ಯಾರೂ ನಿರೀಕ್ಷಿಸದವರಿಗೆ ಸಚಿವ ಸ್ಥಾನ ಸಿಕ್ಕಿರುವುದು ಅಚ್ಚರಿ ವಿಚಾರ. ಆ ಪೈಕಿ ಮುರುಗೇಶ್ ನಿರಾಣಿ ಕೂಡಾ ಒಬ್ಬರು. ನನ್ನನ್ನು ಮಂತ್ರಿ ಮಾಡಿ ಅಂತ ನಿರಾಣಿ, ಸಿಎಂ ಸಾಹೇಬರ ಮನೆಗೆ ಪದೇ ಪದೇ ಎಡತಾಕಿದವರಲ್ಲ. ಹೈ ಕಮಾಂಡ್ ನಾಯಕರನ್ನು ಭೇಟಿ ಮಾಡಿ, ಲಾಬಿ ನಡೆಸಿಲ್ಲ. ಆದರೂ ಬಹಳ ಸುಲಭವಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಅಸಮಾಧಾನಿತ ಶಾಸಕರಿಂದ ಕೇಳಿ ಬಂತು ಹೊಸ ಕೂಗು: ಸಿಎಂಗೆ ಶುರುವಾಯ್ತು ಢವ-ಢವ

ಹಾಗಾದರೆ ನಿರಾಣಿ ಹಿಂದಿರೋದು ಯಾರು..? ಬಿಎಸ್‌ವೈ ಅವರಾ..? ನಳೀನ್ ಕುಮಾರ್ ಕಟೀಲ್ ಅವರಾ..? ಇಬ್ಬರೂ ಅಲ್ಲ.  ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ! ಇವರನ್ನು ಬರೀ ಸ್ವಾಮೀಜಿಯಾಗಿ ನೋಡಿದ್ದೇವೆ. ಅವರ ರಾಜಕೀಯ ಪ್ರಭಾವ ಎಂತದ್ದು ಅಂದ್ರೆ ಒಬ್ಬ ಸಚಿವನನ್ನು ಏಕಾಏಕಿ ಮಂತ್ರಿ ಮಾಡುವಷ್ಟು..! ನಿರಾಣಿಗೆ ಸಚಿವ ಸ್ಥಾನ ದೊರಕಿಸಿಕೊಟ್ಟಿದ್ದು ಹೇಗೆ.? ಇಲ್ಲಿದೆ ರೋಚಕ ಪಾಲಿಟಿಕ್ಸ್..!