ಇತ್ತ ಬಿಜೆಪಿಯಿಂದ ಕನಕಪುರ ಚಲೋ; ಅತ್ತ ಡಿಕೆಶಿ ದೆಹಲಿ ದೌಡು!
ಒಂದು ಕಡೆ ಏಸು ಪ್ರತಿಮೆ ವಿರೋಧಿಸಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಕನಕಪುರ ಚಲೋ ಹಮ್ಮಿಕೊಂಡಿವೆ. ಇನ್ನೊಂದು ಕಡೆ ವಿವಾದದ ಕೇಂದ್ರ ಬಿಂದುವಾಗಿರುವ ಕನಕಪುರ ಬಂಡೆ ಡಿ.ಕೆ. ಶಿವಕುಮಾರ್‌ಗೆ ದೆಹಲಿಯಿಂದ ಕರೆ ಬಂದಿದೆ.
ಬೆಂಗಳೂರು (ಜ.13): ಒಂದು ಕಡೆ ಏಸು ಪ್ರತಿಮೆ ವಿರೋಧಿಸಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಕನಕಪುರ ಚಲೋ ಹಮ್ಮಿಕೊಂಡಿವೆ. ಇನ್ನೊಂದು ಕಡೆ ವಿವಾದದ ಕೇಂದ್ರ ಬಿಂದುವಾಗಿರುವ ಕನಕಪುರ ಬಂಡೆ ಡಿ.ಕೆ. ಶಿವಕುಮಾರ್‌ಗೆ ದೆಹಲಿಯಿಂದ ಕರೆ ಬಂದಿದೆ.
ಕನಕಪುರದಲ್ಲಿ ಸ್ಥಾಪನೆಯಾಗಿರುವ ಏಸು ಪ್ರತಿಮೆ ವಿವಾದ ಈಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನೊಂದು ಕಡೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೇಮಕಕ್ಕೆ ಕ್ಷಣಗಣನೆ ಆರಂಭವಾಗಿದೆ.