K Venkatesh: KPCC ಅಧ್ಯಕ್ಷ ಬದಲಾವಣೆ ಮಾಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ

Share this Video
  • FB
  • Linkdin
  • Whatsapp

ಕಾಂಪೌಂಡರ್ ಕೊಡೋ ಟ್ರೀಟ್ಮೆಂಟೂ ಒಂದೇ, ಡಾಕ್ಟರ್‌ಗಳು ಕೊಡೋ ಟ್ರೀಟ್ಮೆಂಟೂ ಒಂದೇ ಎಂದು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಹಾವೇರಿ ನಗರದ ಪಶು ಆಸ್ಪತ್ರೆಯ ನೂತನ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಕೆ.ವೆಂಕಟೇಶ್, ಹಳ್ಳಿಗಳಲ್ಲಿ ಕಂಪೌಂಡರ್ ಚಿಕಿತ್ಸೆ ಕೊಡುತ್ತಿದ್ದಾರೆ‌ ಅನ್ನೋ ಪ್ರಶ್ನೆಗೆ ಹಾರಿಕೆ ಉತ್ತರ ಕೊಟ್ಟಿದ್ದಾರೆ. ಕಂಪೌಂಡರ್ ಕೊಡುವ ಚಿಕಿತ್ಸೆನೂ ಒಂದೇ, ಡಾಕ್ಟರ್ ಕೊಡುವ ಚಿಕಿತ್ಸೆನೂ ಒಂದೆ, ಅದರೆ ಸರಿಯಾಗಿ ಚಿಕಿತ್ಸೆ ಕೊಡಬೇಕು ಅಷ್ಟೇ , ಟ್ರೀಟ್ಮೆಂಟ್‌ನಲ್ಲಿ ಏನೂ ವ್ಯತ್ಸಾಸ ಇಲ್ಲ, ಇಬ್ಬರು ಮಾಡುವುದು ಒಂದೆ ಚಿಕಿತ್ಸೆ, ಸರಿ ಇರಬೇಕು ಎಂದು ಸಚಿವರು ಹೇಳಿರೋದುಚರ್ಚೆಗೆ ಕಾರಣವಾಗಿದೆ. ಪಶು ಆಸ್ಪತ್ರೆಗಳಲ್ಲಿ ಹುದ್ದೆಗಳು ಖಾಲಿ ಇರೋದು ನಿಜಒಟ್ಟು 18 ಸಾವಿರ ಹುದ್ದೆಗಳಲ್ಲಿ 50 % ರಷ್ಟು ಹುದ್ದೆ ಖಾಲಿ ಇವೆ, ಪಶು ವೈದ್ಯರ ಕೊರತೆ ಇರೋದು‌ ನಿಜ, ನಮ್ಮ ಸರ್ಕಾರ ಬಂದ ಮೇಲೆ 250 ಇನ್ನಪೆಕ್ಟರ್ ನೇಮಕ ಮಾಡಿದೆ, ಗುತ್ತಿಗೆ ಆಧಾರದ ಮೇಲೆ 400 ಹುದ್ದೆ ತುಂಬಿಕೊಳ್ಳಲಾಗಿದೆ, 400 ಜನರ ನೇಮಕ ಮಾಡಿ ಕೊಡುವಂತೆ ಕೆಪಿಎಸ್ಸಿಗೆ ನೀಡಲಾಗಿದೆ, ಮ್ಯಾನೇಜ್ ಮಾಡ್ತಾ ಬಂದಿದ್ದೇವೆ, ಮೊಬೈಲ್ ಕ್ಲಿನೀಕ್ ವೈಹಿಕಲ್ ಮಾಡಿದ್ದೇವೆ ಅವರೂ ಎಲ್ಲಾ ಕಡೆ ನೋಡ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video