Karnataka Politics: ಎಂಬಿ ಪಾಟೀಲರಿಗೆ ಪ್ರಚಾರ ಸಮಿತಿ ಹೊಣೆ, DSP ಜಂಟಿ ಯುದ್ಧ!
* ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ವಿಶೇಷ ತಂತ್ರ
* ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂಬಿ ಪಾಟೀಲ್
* ಮುಂದಿನ ವಿಧಾನಸಭೆ ಚುನಾವಣೆಗೆ ಈಗಲೇ ಹೋರಾಟ
* ಕಾಂಗ್ರೆಸ್ ತಂತ್ರಗಾರಿಕೆ ಏನು?
ಬೆಂಗಳೂರು(ಜ. 26) ಲಿಂಗಾಯತ(Lingayat), ಒಕ್ಕಲಿಗ ಮತ್ತು ಅಹಿಂದ .. ರಾಜ್ಯದ ಪ್ರಮುಖ ಮೂರು ನಾಯಕರಿಗೆ ಕಾಂಗ್ರೆಸ್ (Congress) ಪಕ್ಷ ವಿಶೇಷ ಅಧಿಕಾರದ ಚುಕ್ಕಾಣಿ ನೀಡಿ ಮಹಾದಾಳವನ್ನು ಕಾಂಗ್ರೆಸ್ ಉರುಳಿಸಿದೆ. ಡಿಕೆ ಶಿವಕುಮಾರ್(DK Shivakumar), ಸಿದ್ದರಾಮಯ್ಯ (Siddaramaiah) ಮತ್ತು ಎಂಬಿ ಪಾಟೀಲ್(MB Patil) ಕೈ ಮುಂದಾಳತ್ವದಲ್ಲಿದ್ದಾರೆ.
Karnataka Politics: ಸಿದ್ದು ಹಾಡಿ ಹೊಗಳುತ್ತಲೇ ಸರಿಯಾದ ಗುದ್ದು ನೀಡಿದ ಸಿಸಿ ಪಾಟೀಲ್!
ಅತ್ತ ಉತ್ತರ ಪ್ರದೇಶ ಸೇರಿ ಪಂಚರಾಜ್ಯ ಚುನಾವಣಾ ಅಖಾಡ ಸಿದ್ಧವಾಗಿದ್ದರೆ ಇತ್ತ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಆರಂಭವಾಗಿದೆ. ಒಂದು ಕಡೆ ಪಕ್ಷಾಂತರದ ಹೇಳಿಕೆಗಳ ನಡುವೆ ಎಂಬಿ ಪಾಟೀಲರಿಗೆ ವಿಶೇಷ ಅಧಿಕಾರ ಸಿಕ್ಕಿರುವ ಹಿಂದಿನ ಗುಟ್ಟು ಏನು?