ಕಾಂಗ್ರೆಸ್‌ನಿಂದ ಕೆಜಿಫ್ ಬಾಬು ಅಮಾನತು, ಹಿಂದೂಗಳ ಕೆರಳಿಸಿತು ಸಿದ್ದು ಮಾತು!

ಕಾಂಗ್ರೆಸ್‌ಗೆ ಬಹುಮತ ಬರಲ್ಲ ಎಂದ ಕೆಜಿಎಫ್ ಬಾಬು ಕಾಂಗ್ರೆಸ್‌ನಿಂದ ಅಮಾನತಾಗಿದ್ದಾರೆ. ಇತ್ತ ಗೌರಿ ಲಂಕೇಶ್ ಕೊಂದವರು ಸನಾತನ ಧರ್ಮದವರು ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ಹೆಚ್ಚಾಗಿದೆ. ಇಂದಿನ ಇಡಿ ದಿನದ ಪ್ರಮುಖ ಸುದ್ದಿಗಳ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

Share this Video
  • FB
  • Linkdin
  • Whatsapp

ಕಾಂಗ್ರೆಸ್ ಟೆಕಿಟ್ ಆಕಾಂಕ್ಷಿ ಕೆಜಿಎಫ್ ಬಾಬು ಇಂದು ಕೆಪಿಸಿಸಿ ಕಚೇರಿಯಲ್ಲಿ ಬಂಡಾಯದ ಬಾವುಟ ಹಾರಿಸಿದ್ದರು. ಈಗಾಗಲೇ ಚಿಕ್ಕಪೇಟೆಯಲ್ಲಿ 30 ಕೋಟಿ ರೂಪಾಯಿ ಖರ್ಚು ಮಾಡಿದ್ದೇನೆ. ಪ್ರತಿ ಮನೆಗೆ 5,000 ರೂಪಾಯಿ ನೀಡಿದ್ದೇನೆ. ಆದರೆ ಟಿಕೆಟ್ ಸ್ಪಷ್ಟತೆ ನೀಡುತ್ತಿಲ್ಲ. ಹೀಗಾದಲ್ಲಿ ಕಾಂಗ್ರೆಸ್ 80 ಸ್ಥಾನವೂ ಗೆಲ್ಲಲ್ಲ ಎಂದು ಕೆಜಿಎಫ್ ಬಾಬು ಬಾಂಬ್ ಹಾಕಿದ್ದರು. ಇದರ ಬೆನ್ನಲ್ಲೇ ಶಿಸ್ತು ಕ್ರಮದಡಿ ಕೆಜಿಎಫ್ ಬಾಬುವನ್ನು ಕಾಂಗ್ರೆಸ್ ಅಮಾನತು ಮಾಡಿದೆ. ಇತ್ತ ಸಿದ್ದರಾಮಯ್ಯನ ಸನಾತನ ಧರ್ಮದವರು ಕೊಲೆಗಡುಕರು ಅನ್ನೋ ಹೇಳಿಕೆ ಹಿಂದೂಗಳನ್ನು ಕೆರಳಿಸಿದೆ. ಗಾಂಧಿ ಕೊಂದವರು, ಗೌರಿ ಲಂಕೇಶ ಕೊಂದವರು ಸನಾತನ ಧರ್ಮದವರು. ಸನಾತದ ಧರ್ಮ ಅಂದರೆ ಯಾರು? ಆರ್‌ಎಸ್‌ಎಸ್‌ನವರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಾವು ಹಳ್ಳಿಯಲ್ಲಿ ರಾಮಮಂದರಿ ಕಟ್ಟಿದ್ದೇವೆ. ಬಿಜೆಪಿ ರಾಮ ಮಂದಿರದ ಕುರಿತು ಎಲ್ಲಾ ಕಡೆಹೇಳಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸಿದ್ದು ಹೇಳಿದ್ದಾರೆ. ಇದೀಗ ಸಿದ್ದುಮಾತಿಗೆ ಆಕ್ರೋಶ ಹೆಚ್ಚಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video