ಕೋರೋನಾ ಭೂತ ಬಿಡ್ತಾ ಇರೋದು ಕೇಶವ ಕೃಪಾ! ಎಚ್‌ಡಿಕೆ ಆರೋಪ!

ಪಂಚರತ್ನ ರಥಯಾತ್ರೆಯಲ್ಲಿ ಜನತೆಯ ಅಲೆಯನ್ನ ನೋಡಿ ಕೇಶವ ಕೃಪದಲ್ಲಿ ಚರ್ಚೆಯಾಗ್ತಿದೆ.  ಈ ವಿಚಾರವನ್ನು ಪ್ರಧಾನಮಂತ್ರಿಗಳ ಗಮನಕ್ಕೆ ತಂದು ಮತ್ತೆ ಇದಕ್ಕೆ ನಿರ್ಬಂಧ ಏರಲು ಕೊರೊನಾ ಭೂತ ಬಿಡುವ ಹುನ್ನಾರ ನಡೆಯುತ್ತಿದೆ.

Share this Video
  • FB
  • Linkdin
  • Whatsapp

ರಾಮನಗರ (ಡಿ.22): ಪಂಚರತ್ನ ರಥಯಾತ್ರೆಯಲ್ಲಿ ಜನತೆಯ ಅಲೆಯನ್ನ ನೋಡಿ ಕೇಶವ ಕೃಪದಲ್ಲಿ ಚರ್ಚೆಯಾಗ್ತಿದೆ. ಈ ವಿಚಾರವನ್ನು ಪ್ರಧಾನಮಂತ್ರಿಗಳ ಗಮನಕ್ಕೆ ತಂದು ಮತ್ತೆ ಇದಕ್ಕೆ ನಿರ್ಬಂಧ ಏರಲು ಕೊರೊನಾ ಭೂತ ಬಿಡುವ ಹುನ್ನಾರ ನಡೆಯುತ್ತಿದೆ ಎಂಬ ಮಾಹಿತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೋವಿಡ್‌ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಜಿಲ್ಲೆಯಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ವಿಚಾರವಾಗಿ ನಾನು ಲಘುವಾಗಿ ಮಾತನಾಡುವುದಿಲ್ಲ. ಯಾವುದೇ ಸಾಂಕ್ರಾಮಿಕ ರೋಗ ಬಂದಾಗ ಸರ್ಕಾರ ಮುಂಜಾಗೃತ ಕ್ರಮ ತೆಗೆದುಕೊಳ್ಳಬೇಕು. ಅದಕ್ಕೆ ನನ್ನ ಸಹಕಾರ ಇದೆ. ಆದರೇ ಈ ಪಂಚರತ್ನ ಯಾತ್ರೆಯನ್ನ ಹೇಗೆ ನಿಲ್ಲಿಸಬಹುದು ಎಂಬ ಚರ್ಚೆ ನಡೆಯುತ್ತಿದೆ ಎಂಬ ಮಾಹಿತಿ ನನಗಿದೆ. ಈ ವಿಚಾರವನ್ನು ಕೇಶವಕೃಪದಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

Related Video