ಜೂ. 14 ರ ನಂತರ ರಾಜಕೀಯ ಸಂಚಲನ? ಕುತೂಹಲ ಮೂಡಿಸಿದೆ ಯೋಗೇಶ್ವರ್ ಹೇಳಿಕೆ

- 14ರವರೆಗೆ ‘ಮೌನ’: ಯೋಗೇಶ್ವರ್‌ ನಿರ್ಧಾರ

- ಶಾಸಕಾಂಗ ಸಭೆಗೆ ಸುನಿಲ್‌ ಕುಮಾರ್‌ ಒತ್ತಾಯ

- ಕೋವಿಡ್‌ ಕೆಲಸದಲ್ಲಿ ತೊಡಗಿರುವ ಬಿಎಸ್‌ವೈ

 

First Published Jun 9, 2021, 1:16 PM IST | Last Updated Jun 9, 2021, 1:20 PM IST

ಬೆಂಗಳೂರು (ಜೂ. 09): ಪಕ್ಷದ ಹೈಕಮಾಂಡ್‌ ಹೇಳಿದರೆ ರಾಜೀನಾಮೆಗೂ ಸಿದ್ಧ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ ನಂತರದ ಬಿಸಿ ಬಿಜೆಪಿಯಲ್ಲಿ ಇನ್ನೂ ಆರಿಲ್ಲ. ಇಡೀ ಚರ್ಚೆ ಸ್ಫೋಟಗೊಳ್ಳಲು ಕಾರಣರಾದ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ಅವರು, ಜೂ.14ರವರೆಗೆ ಸುಮ್ಮನಿರುವಂತೆ ತಮಗೆ ಪಕ್ಷದ ವರಿಷ್ಠರು ಸೂಚಿಸಿದ್ದಾರೆ ಎಂದು ತಮ್ಮ ಆಪ್ತರ ಬಳಿ ಹೇಳುವ ಮೂಲಕ 14ರ ನಂತರ ಏನೋ ಬೆಳವಣಿಗೆ ಆಗಲಿದೆ ಎಂಬ ಕುತೂಹಲಕ್ಕೆ ಕಾರಣರಾಗಿದ್ದಾರೆ. 

ನಾಯಕತ್ವ ಬದಲಾವಣೆ ಕುರಿತು ಬಹಿರಂಗ ಹೇಳಿಕೆ ಬೇಡ; ಹೈಕಮಾಂಡ್ ಖಡಕ್ ಸೂಚನೆ

ಇನ್ನೊಂದು ಕಡೆ ಬಿಜೆಪಿ ಹೈಕಮಾಂಡ್‌ ಈಗ ಏನೇ ಹೇಳಿಕೆ ನೀಡುವುದಕ್ಕೂ ಹಿಂದೆ ಮುಂದೆ ನೋಡುತ್ತಿದೆ. ಹೀಗಾಗಿಯೇ ಸದ್ಯಕ್ಕೆ ಯಾರೂ ಬಹಿರಂಗ ಹೇಳಿಕೆ ನೀಡುವುದು ಬೇಡ ಎಂಬ ಸಂದೇಶವನ್ನು ರಾಜ್ಯ ನಾಯಕರಿಗೆ ರವಾನಿಸಿದೆ. ಹಾಗಾದರೆ ಜೂ. 14 ರ ಬಳಿಕ ರಾಜಕೀಯ ಬದಲಾವಣೆಯಾಗುತ್ತಾ..? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್.